







ಪುತ್ತೂರು : ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾಭಾರತಿ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವವು ದಿನಾಂಕ ಆ.13ದಂದು ಜರುಗಿತು.


ವಿದ್ಯಾಭಾರತಿ ಸಮೂಹದ 30 ಶಾಲೆಗಳು ಇದರಲ್ಲಿ ಪಾಲ್ಗೊಂಡಿದ್ದು, ಸುಮಾರು 800ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಗಣಿತ ಮತ್ತು ವಿಜ್ಞಾನ ಮಾದರಿ ಪ್ರದರ್ಶನ, ಗಣಿತ ಮತ್ತು ವಿಜ್ಞಾನ ಪ್ರಯೋಗ, ಸಂಸ್ಕೃತಿ ಕಥಾ ಕಥನ, ರಸಪ್ರಶ್ನೆ, ಗಣಿತ ಮತ್ತು ವಿಜ್ಞಾನ ಪತ್ರಿಕಾ ಮಂಡನೆ, ಮಣ್ಣಿನ ಕಲಾಕೃತಿ ಹೀಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಬಾಲವರ್ಗ, ಕಿಶೋರವರ್ಗ ಮತ್ತು ತರುಣವರ್ಗ ಎಂಬ ಮೂರು ವಿಭಾಗಗಳಿದ್ದು, ವಿವೇಕಾನಂದ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳು ಗಣನೀಯ ಸಾಧನೆಗೈದಿರುವರು.



ಬಾಲವರ್ಗದ ಗಣಿತ ಪ್ರಯೋಗದಲ್ಲಿ ಅಭಿಜ್ಞಾ-8 ನೇ ತರಗತಿ (ಸ್ಮಿತಾ. ಕೆ ಮತ್ತು ಹರಿಪ್ರಸಾದ್ ದಂಪತಿ ಪುತ್ರಿ ) -ಪ್ರಥಮ ಸ್ಥಾನ, ವಿಜ್ಞಾನ ಮಾದರಿ ವಿಭಾಗದ ವಿದ್ಯುಚ್ಚಕ್ತಿ ಸಂರಕ್ಷಣೆ ವಿಷಯದಲ್ಲಿ ರಾಮ್ ಧ್ಯಾನ್ -7ನೇ ತರಗತಿ – ದ್ವಿತೀಯ ಸ್ಥಾನ, ವಿಜ್ಞಾನ ರಸಪ್ರಶ್ನೆಯಲ್ಲಿ- ಸನ್ಮಿತ್ ಬಿ -8ನೇ ತರಗತಿ, ಅಧಿತ್ರಿ. ಎ.ಆಳ್ವ- 7ನೇ ತರಗತಿ ಮತ್ತು ಸ್ವಸ್ತಿ ಎಂ. ಭಟ್ -6ನೇ ತರಗತಿ ಇವರ ತಂಡವು
ದ್ವಿತೀಯ ಸ್ಥಾನ, ವೇದಗಣಿತ ಪತ್ರವಾಚನದಲ್ಲಿ ಅಚಿಂತ್ಯ ಟಿ. ಭಟ್ -7ನೇ ತರಗತಿ -ದ್ವಿತೀಯ ಸ್ಥಾನ, ಗಣಿತ ಮಾದರಿ ಪ್ರದರ್ಶನದಲ್ಲಿ ಸಾನಿಧ್ಯ ಎಸ್. ರಾವ್ -7ನೇ ತರಗತಿ -ತೃತೀಯ ಸ್ಥಾನ, ಪಡೆದಿರುತ್ತಾರೆ.
ಕಿಶೋರ ವರ್ಗದ ವಿಜ್ಞಾನ ಪತ್ರವಾಚನದಲ್ವಿ ಸುದೀಕ್ಷಾ ಎಸ್. ಭಟ್ -9 ನೇ ತರಗತಿ ( ಡಾll ರಾಘವೇಂದ್ರ ಪ್ರಸಾದ್ ಮತ್ತು ಶ್ರುತಿ ಎಂ ಎಸ್ ದಂಪತಿ ಪುತ್ರಿ )-ಪ್ರಥಮ ಸ್ಥಾನ, ವೇದಗಣಿತ ರಸಪ್ರಶ್ನೆಯಲ್ಲಿ ಪ್ರಥಮ್ ಟಿ. ರಾವ್-10 ನೇ ತರಗತಿ ( ಅಮಿತಾ ರಾವ್ ಮತ್ತು ಮುರಳೀಧರ ರಾವ್ ಇವರ ಪುತ್ರ ), ಮನ್ವಿತ್ ಶಂಕರ್-10 ನೇ ತರಗತಿ ( ಸತ್ಯಶಂಕರ್ ಎಂ ಮತ್ತು ವಿಜಯಲಕ್ಷ್ಮಿ ಕೆ ದಂಪತಿ ಪುತ್ರ )ಮತ್ತು ಚಿಂತನ್ ಹರೀಶ್ . ಶೆಟ್ಟಿ-10 ನೇ ತರಗತಿ ( ಹರೀಶ್ ಸಚೀಂದ್ರ ಶೆಟ್ಟಿ ಮತ್ತು ಬಬಿತಾ ರವರ ಪುತ್ರ )ತಂಡವು ಪ್ರಥಮ ಸ್ಥಾನವನ್ನು, ಗಣಿತ ಪ್ರಯೋಗದಲ್ಲಿ ಭಾರವಿ.ಕೆ. ಭಟ್- 10 ನೇ ತರಗತಿ ( ಡಾll ರವಿಪ್ರಕಾಶ್ ಕೆ ಮತ್ತು ಡಾll ವಿಜಯ ಸರಸ್ವತಿ. ಬಿ.ದಂಪತಿ ಪುತ್ರ)- ಪ್ರಥಮ ಸ್ಥಾನ, ವೇದಗಣಿತ ಪತ್ರವಾಚನದಲ್ಲಿ ಜನ್ಯ. ಪಿ-9 ನೇ ತರಗತಿ -ದ್ವಿತೀಯ ಸ್ಥಾನ, ಸಂಸ್ಕೃತಿ ಜ್ಞಾನ ಆಶುಭಾಷಣದಲ್ಲಿ ಮೇಧಾ ಭಟ್ -9ನೇ ತರಗತಿ ದ್ವಿತೀಯ ಸ್ಥಾನ, ವಿಜ್ಞಾನ ರಸಪ್ರಶ್ನೆಯಲ್ಲಿ-10 ನೇ ತರಗತಿಯ ಆರುಷಿ ಎಸ್ ಪುತ್ತೂರಾಯ, ಅಚಿಂತ್ಯ ಕೃಷ್ಣ ಮತ್ತು ಸೃಷ್ಟಿ.ಎ. ತಂಡವು -ತೃತೀಯ ಸ್ಥಾನ, ಕ್ಷೇತ್ರಗಣಿತ ಸಂಬಂಧಿತ ಪ್ರದರ್ಶನದಲ್ಲಿ ತನಿಷ್. ಎಂ.ಭಟ್-10ನೇ ತರಗತಿ ತೃತೀಯ ಸ್ಥಾನ ಪಡೆದಿರುವರು. ಪ್ರಥಮ ಸ್ಥಾನ ಪಡೆದಿರುವ ಎಲ್ಲಾ ಸ್ಪರ್ಧಿಗಳು ಮುಂದಿನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.










