







ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ (ಆಡಳಿತ)ರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಕೆನರಾ ಪ್ರೌಢಶಾಲೆ ಡೊಂಗರಕೇರಿ ಮಂಗಳೂರು ಇಲ್ಲಿ ಆ.21ರಂದು ನಡೆದ ಜಿಲ್ಲಾಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಜೀವನ್ ಕೋಡಿಬೈಲ್ ಅವರು 3000ಮೀಟರ್ ಇನ್ ಲೈನ್ ರೋಡ್ ರೇಸ್ನಲ್ಲಿ ಪ್ರಥಮ, 5000 ಮೀಟರ್ ಮತ್ತು 1000 ಮೀಟರ್ ರಿಂಕ್ ಲೈನ್ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.


ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿ ನೀಡಿದ್ದಾರೆ. ಈತ ಕಡಬದ ಕೋಡಿಬೈಲು ನಿವಾಸಿ ಶಿವರಾಜ್ ಮತ್ತು ಸ್ಮಿತಾ ದಂಪತಿಯ ಪುತ್ರ.













