ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ-ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ

0


ಪುತ್ತೂರು:ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಕೆಪಿಎಸ್ ಸ್ಕೂಲ್ ಪಂಜಿನಡ್ಕ ಮುಲ್ಕಿ ಇಲ್ಲಿ ನಡೆಯಿತು.ಈ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

ಪ್ರಥಮ ವಾಣಿಜ್ಯ ವಿಭಾಗದ ಮನ್ವಿತ್ (ರಿದಮಿಕ್) ಪ್ರಥಮ ಸ್ಥಾನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸೃಜನ್(ರಿದಮಿಕ್) ಪ್ರಥಮ,ರಿತೇಶ್ ಹಾಗೂ ಯಜ್ಞ(ಆರ್‌ಟಿಸ್ಟಿಕ್)ದ್ವಿತೀಯ,ಸ್ಕಂದ ಬಲ್ಲಕ್ಕುರಾಯ(ಟ್ರೇಡಿಶನಲ್)ಪ್ರಥಮ,ಲೀಕ್ಷಿತ್ (ಟ್ರೇಡಿಶನಲ್)ದ್ವಿತೀಯ ಹಾಗೂ(ರಿದಮಿಕ್) ಪ್ರಥಮ ಸ್ಥಾನ ಪಡೆದಿರುತ್ತಾರೆ.

ತಂಡವು ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ರವಿಶಂಕರ್,ಡಾ .ಜ್ಯೋತಿ ಮತ್ತು ಯತೀಶ್ ಅವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here