







ಮೈಸೂರು: ಸಾತಗಳ್ಳಿಯಲ್ಲಿ ಸೈಕಲ್ ವೆಲೋಡ್ರೋಮ್ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದಲ್ಲಿ ಕಂಬಳ ಆಯೋಜನೆಗೆ ತಯಾರಿ ನಡೆದಿದ್ದು, ಶಾಸಕ ಅಶೋಕ್ ಕುಮಾರ್ ರೈ ಕೋಣಗಳ ಓಡಾಡಲು ಬೇಕಾಗುವ ಓಟದ ಟ್ರ್ಯಾಕ್ (ಕರೆ) ನಿರ್ಮಾಣಕ್ಕೆ ಚಾಲನೆ ನೀಡಿದರು.


ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು ಕಂಬಳ ಆಯೋಜನೆಗೆ ನೇಮಿಸಿರುವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಕಂಬಳ ಕೋಣಗಳನ್ನು ಕಟ್ಟುವ ಸ್ಥಳ, ವೇದಿಕೆ, ನೀರಿನ ತೊಟ್ಟಿ, ವಾಹನ ನಿಲುಗಡೆಯ ಜಾಗಗಳನ್ನು ಪರಿಶೀಲಿಸಿದರು. ಕಂಬಳಕ್ಕಾಗಿ ನಿರ್ಮಿಸಿರುವ ನಕ್ಷೆಯನ್ನು ಗಮನಿಸಿ ಸಲಹೆ ನೀಡಿದರು.



ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗಸ್, ರಂಜಿತ್ ಬಂಗೇರ, ಶರತ್ ಕೇಪುಲು, ಜಿತೇಶ್ ಉಪ್ಪಿನಂಗಡಿ, ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೈತ್ರಿ ಇದ್ದರು.









