ಪಟ್ಟೆ ಶ್ರೀಕೃಷ್ಣ ಸಮೂಹ ಸಂಸ್ಥೆಗಳಲ್ಲಿ “ಮಾಯಕದಬಿನ್ನೆದಿ”ತುಳು ಯಕ್ಷಗಾನ.

0

ತುಳು ಭಾಷೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯುವ ಮೂಲಕ ತುಳು ಭಾಷೆಗೆ ವಿಶ್ವ ಮಾನ್ಯತೆ ದೊರೆಯಬೇಕು.- ಗೋಪಾಲಕೃಷ್ಣ ಭಟ್

 ಬಡಗನ್ನೂರು: ತುಳು ವರ್ಲ್ಡ್ ಫೌಂಡೇಶನ್ ಕಟೀಲು, ತುಳುವ ಮಹಾಸಭೆ ಪುತ್ತೂರು ವಲಯ, ತುಳುವೇಶ್ವರಿ ಆಟ ಕೂಟ ಆಶ್ರಯದಲ್ಲಿ ಸೋಣದ ದುನಿಪು ಮತ್ತು ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ ಬರೆದ ಮಾಯಕದ ಬಿನ್ನೆದಿ ಎಂಬ ಯಕ್ಷಗಾನವು ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಸಭಾಭವನದಲ್ಲಿ .ಅ. 22 ರಂದು ಜರಗಿತು.


ಕಾರ್ಯಕ್ರಮವನ್ನು  ಭಾನುಮತಿ ಶೆಟ್ಟಿ ಕಕ್ವಗುತ್ತು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ  “ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿಯನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು”ಎಂದು ಕರೆ ನೀಡಿ ಶುಭ ಹಾರೖೆಸಿದರು.

ಮುಖ್ಯ ಅತಿಥಿಗಳಾದ  ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರಳ ಡಾ. ರಾಜೇಶ್ ಕೃಷ್ಣ ಆಳ್ವ ರವರು “ಸೋಣದ ದುನಿಪುನ ಕುರಿತು ಮಾತನಾಡಿ, ಆಟಿ ತಿಂಗಳ ಕಷ್ಟದ ದಿನಗಳನ್ನು, ಸೋಣ ತಿಂಗಳ ಹಬ್ಬದ ದಿನಗಳ, ಆಚಾರ ವಿಚಾರ ಮತ್ತು  ಆಹಾರ ಪದ್ಧತಿಗಳನ್ನು ತಿಳಿಯಪಡಿಸಿದರು.

ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ  ಹೇಮನಾಥ ಶೆಟ್ಟಿ ಕಾವು ರವರು ಮಾತನಾಡಿ  ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಡು ಸಂಸ್ಥೆಯ ಹೆಸರನ್ನು ಜನಪ್ರಿಯಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು ಶ್ರಮವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಹೇಳಿದರು. 

ಪಟ್ಟೆ  ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ  ತುಳು ಭಾಷೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯುವ  ಮೂಲಕ ತುಳು ಭಾಷೆಗೆ ವಿಶ್ವ ಮಾನ್ಯತೆ ದೊರೆಯುವಂತಾಗಬೇಕು.ಗಂಡು ಕಲೆ ಎಂದು ಹೆಸರಾದ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು.ಎಂದು ಹೇಳಿದರು.

ಮಂದಾರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ  ಪ್ರಮೋದ್ ಸಪ್ರೆ, ಪುತ್ತೂರು ವಲಯದ ತುಳುವ ಮಹಾಸಭಾ ಸಂಚಾಲಕ ಮನೋಹರ ರೈ ಮನವಳಿಕೆ, ಪುತ್ತೂರು ವಲಯದ ತುಳುವ ಮಹಾಸಭಾ ಅಧ್ಯಕ್ಷೆ  ವೇದಾವತಿ ರಾಜೇಶ್ ಪುತ್ತೂರು ತುಳುವ ಮಹಾಸಭಾ  ಕಾರ್ಯದರ್ಶಿ  ನಿತ್ಯಾನಂದ ಶೆಟ್ಟಿ, ತುಳು ವಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ್ ರೈ, ಬಸ್ರೂರು ತುಳುವೇಶ್ವರಿ ದೇವಸ್ಥಾನದ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ  ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೆಶ್ ಹಿರಣ್ಯ, ಶಿಕ್ಷಕ ವೃಂದದವರು, ನಿವೃತ್ತ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು,ಹಾಗೂ ಊರ ಯಕ್ಷಗಾನ ಕಲಾಭಿಮಾನಿಗಳು, ಭಾಗವಹಿಸಿದ್ದರು.

ಪುತ್ತೂರು ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳು,ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರು ಆದ ಗಣರಾಜ ಕುಂಬ್ಳೆ ರವರು ಸ್ವಾಗತಿಸಿ, ವಂದಿಸಿದರು.

ಯಕ್ಷಗಾನ ಕಲಾವಿದರಾಗಿ ಪ್ರಶಾಂತ್ ರೈ ಮುಂಡಾಳಗುತ್ತು, ಪ್ರಮೋದ್ ಕುಮಾರ್, ರೋಹಿತ್ ಉಚ್ಚಿಲ, ಅಕ್ಷಯ್ ಮಾರ್ನಡ್ , ಶಶಿಕಿರಣ್ ಕಾವು, ಚಂದ್ರಶೇಖರ್ ಧರ್ಮಸ್ಥಳ, ಸಂಸ್ಥೆಯ ವಿದ್ಯಾರ್ಥಿಗಳಾದ ಆದಿತ್ಯಕೃಷ್ಣ , ಸ್ವರೂಪ್,ಅಹನ ಮತ್ತು ಪಲ್ಲವಿ  ಭಾಗವಹಿಸಿದರು.

LEAVE A REPLY

Please enter your comment!
Please enter your name here