ಪಡುಮಲೆಯಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ – ಆ.28 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ   ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪಡುಮಲೆ ಇದರ ವತಿಯಿಂದ  ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಅ. 28 ರಂದು ಗಂ 8.30 ರಿಂದ  ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು.

ಆ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮ 
28 ರಂದು ಗಂ 8.30 ಶ್ರೀ ವರಮಹಾಲಕ್ಷ್ಮಿ ಪೂಜಾ ಆರಂಭ,  ಮಧ್ಯಾಹ್ನ 12 ರಿಂದ  ಶ್ರೀ ದೇವರಿಗೆ ಮಹಾಪೂಜೆ,  ಶ್ರೀ ವರಮಹಾಲಕ್ಷ್ಮಿ ಪೂಜಾ ಮಹಾಮಂಗಳಾರತಿ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ.

ಭಜನಾ ಕಾರ್ಯಕ್ರಮ:
ಪೂರ್ವಾಹ್ನ ಗಂ 8 ರಿಂದ  ಭಜನಾ ಕಾರ್ಯಕ್ರಮ ಭಜನಾ ಕಾರ್ಯಕ್ರಮದಲ್ಲಿ  ಸರ್ವಶಕ್ತಿ ಭಜನಾ ಮಂಡಳಿ ಪಡುಮಲೆ, ಶ್ರೀ ಮಹಾಲಕ್ಷ್ಮಿ ವನಿತಾ ಭಜನಾ ಮಂಡಳಿ ಸುಳ್ಯ ಪದವು, ಶ್ರೀ ಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪಟ್ಟೆ, ಶ್ರೀ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸೇವಾ ಸಮಿತಿ ಪಡುಮಲೆ, ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ ಸುಳ್ಯ ಪದವು ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ ಪಡುಮಲೆ   ಇದರ ತಂಡದ ಸದಸ್ಯರಿಂದ  ಭಜನಾ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಬೆಳಿಗ್ಗೆ ಗಂಟೆ 11.00 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು  ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನ ಸಮಿತಿ, ಅಧ್ಯಕ್ಷ ಸತೀಶ್‌ ರೈಕಟ್ಟಾವು  ರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.  ಕಾರ್ಯಕ್ರಮವು ಪಡುಮಲೆ ಶ್ರೀ ವರಮಹಾಲಕ್ಷ್ಮಿಪೂಜಾ ಸಮಿತಿ ಅಧ್ಯಕ್ಷೆ ಭಾರತಿ ರೈ ಕುದ್ಮಾಡಿ  ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. 

ಗೌರವ ಉಪಸ್ಥಿತರಾಗಿ ಶ್ರೀ ಕ್ಷೇತ್ರ ಪಡುಮಲೆ ನಿಕಟಪೂರ್ವ  ವ್ಯವಸ್ಥಾಪನ ಸಮಿತಿ  ಅಧ್ಯಕ್ಷ  ಮನೋಜ್ ರೈಪೇರಾಲು , ಶ್ರೀ ಕ್ಷೇತ್ರದ  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಶ್ರೀನಿವಾಸ ಭಟ್ ಚಂದುಕೂಡ್ಲು  ಪಡುಮಲೆ ಶ್ರೀ  ಕೋಟಿ ಚೆನ್ನಯ ಪ್ರತಿಷ್ಠಾನ ಗೌರವಾಧ್ಯಕ್ಷ ನಾರಾಯಣ ರೈ ಕುದ್ಯಾಡಿ,ವರಮಹಾಲಕ್ಷ್ಮಿ ಪುಜಾ ಸಮಿತಿ ಗೌರವಾಧ್ಯಕ್ಷೆ ವಾಣಿಶ್ರೀ ಪಡುಮಲೆ   ಶ್ರೀ ಕ್ಷೇತ್ರ ಪಡುಮಲೆ  ಪ್ರಧಾನ ಅರ್ಚಕ  ಮಹಾಲಿಂಗ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಗಳಾದ ಪುರಂದರ ರೈ ಕುದ್ಯಾಡಿ,  ಶ್ರೀನಿವಾಸ ಗೌಡ ಕನ್ನಯ,ಜನಾರ್ಧನ ಪೂಜಾರಿ ಪದಡ್ಕ ಶ್ರೀಮತಿ ಸುಳ್ಯಪದವು,ಗೋಪಾಲ ನಾಯ್ಕ ದೊಡ್ಡಡ್ಕ ಭಾಗವಹಿಸಲಿದ್ದಾರೆ.

ಗೌರವಾರ್ಪಣೆ :
ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನ ಸಮಿತಿ, ಸದಸ್ಯರು, ಪಟ್ಟೆ  ಶ್ರೀಕೃಷ್ಣ ಅನುದನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ನಿಕಟ ಪೂರ್ವ ಗೌರವಾಧ್ಯಕ್ಷರು ಆಗಿರುವ  ಶಂಕರಿ ನಾರಾಯಣ ಪಟ್ಟೆ ಇವರಿಗೆ  ಪುಜಾ ಸಮಿತಿ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here