






ಪುತ್ತೂರು : ಕೇರಳದ ಸಾಂಸ್ಕೃತಿಕ ಪರಂಪರೆ , ಸಮೃದ್ಧಿ , ಸಮಾನತೆ ಮತ್ತು ಸಹಬಾಳ್ವೆಯ ಸಂಕೇತವಾಗಿರುವ ಓಣಂ ಹಬ್ಬವನ್ನು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ಶಿಕ್ಷಣ ಸಂಸ್ಥೆಯಲ್ಲಿ ” Onam @Pragathi – Spirit of Togetherness ” ಎಂಬ ಶೀರ್ಷಿಕೆಯಡಿ ಆ.26 ರಂದು ಆಚರಿಸಲಾಯಿತು.




ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಪೂಕಳಂ ಅಲಂಕಾರದ ನಡುವೆ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ತರಗತಿವಾರು ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿವಿಧ ತರಗತಿಗಳ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹೂಗಳನ್ನು ಬಳಸಿ ಕಲಾತ್ಮಕ ಹಾಗೂ ಆಕರ್ಷಕ ಪೂಕಳಂಗಳನ್ನು ರಚಿಸಿ ಮೆಚ್ಚುಗೆಗೆ ಪಾತ್ರರಾದರು.
ವಿದ್ಯಾರ್ಥಿಗಳಿಗೆ ಓಣಂ ಸದ್ಯವನ್ನು ಏರ್ಪಡಿಸಲಾಗಿತ್ತು. ಓಣಂ ವಿಶೇಷ ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ , ಹಾಡು , ನೃತ್ಯ , ರ್ಯಾಂಪ್ ವಾಕ್ ಹಾಗೂ ಇತರ ಕಲಾ ಪ್ರದರ್ಶನ ನಡೆಯಿತು.





ಪೂಕಳಂ ಸ್ಪರ್ಧೆಯಲ್ಲಿ 10ನೇ ತರಗತಿ ಪ್ರಥಮ ಸ್ಥಾನ , ದ್ವಿತೀಯ ಸ್ಥಾನವನ್ನು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು.ಭಾಷಣ ಸ್ಪರ್ಧೆಯಲ್ಲಿ ಫಾತಿಮತ್ ಫಿಝಾ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು . ಕಾರ್ಯಕ್ರಮದ ಬೆಸ್ಟ್ ಫರ್ಫಾಂಮೆನ್ಸ್ ಪ್ರಶಸ್ತಿಯನ್ನು ಮೊಹಮ್ಮದ್ ನಹೀಮ್ , ಆರ್ ಶಾರ್ವರಿ ಹಾಗೂ ತ್ರಿಶಾ ಇವರು ಪಡೆದುಕೊಂಡರು.











