ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ, ಧಾರ್ಮಿಕ ಸಭೆ ಸನ್ಮಾನ 

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪಡುಮಲೆ ಇದರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಅ. 28 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

28 ರಂದು ಬೆಳಿಗ್ಗೆ ಶ್ರೀ ವರಮಹಾಲಕ್ಷ್ಮಿ ಪೂಜಾ ಆರಂಭಗೊಂಡು, ಮಧ್ಯಾಹ್ನ ಶ್ರೀ ವರಮಹಾಲಕ್ಷ್ಮಿ ಪೂಜಾ ಮಹಾಮಂಗಳಾರತಿ ಬಳಿಕ ಶ್ರೀ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಬಿ. ಮಾರ್ಗದರ್ಶನದಲ್ಲಿ ಗಣೇಶ್ ಭಟ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.

ಭಜನಾ ಕಾರ್ಯಕ್ರಮ:

ಪೂರ್ವಾಹ್ನ ಗಂ 8 ರಿಂದ ವಿವಿಧ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಸರ್ವಶಕ್ತಿ ಭಜನಾ ಮಂಡಳಿ ಪಡುಮಲೆ, ಶ್ರೀ ಮಹಾಲಕ್ಷ್ಮಿ ವನಿತಾ ಭಜನಾ ಮಂಡಳಿ ಸುಳ್ಯ ಪದವು, ಶ್ರೀ ಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ,ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪಟ್ಟೆ, ಶ್ರೀ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸೇವಾ ಸಮಿತಿ ಪಡುಮಲೆ, ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ ಸುಳ್ಯ ಪದವು ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ ಪಡುಮಲೆ ತಂಡಗಳು ಭಾಗವಹಿಸಿದ್ದವು.

ಧಾರ್ಮಿಕ ಸಭಾ ಕಾರ್ಯಕ್ರಮ:

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ, ಅಧ್ಯಕ್ಷ ಸತೀಶ್‌ ರೈಕಟ್ಟಾವು ರವರು ದೀಪ ಪ್ರಜ್ವಲಿಸಿ ಮಾತನಾಡಿ, ವರಮಹಾಲಕ್ಷ್ಮಿ ವೃತ್ತ ಅತ್ಯಂತ ಶ್ರೇಷ್ಠವಾದ ಹಬ್ಬ. ಹಿಂದೂ. ಭಕ್ತರು ದೇಶದ್ಯಾಂತ ಅದರಲ್ಲೂ ಮಹಿಳೆಯರು ಆಚರಿಸುವ ಹಬ್ಬವಾಗಿದೆ. ಕಳೆದ 17 ವರ್ಷಗಳಿಂದ ನಮ್ಮ ಕ್ಷೇತ್ರದ ನಡೆಯುತ್ತಿರುವುದು ಖುಷಿ ತಂದಿದೆ ಸುಮಾರು ಒಂದು ತಿಂಗಳುಗಳಿಂದನೇ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಪೂಜಾ ಸಮಿತಿ ವರಮಹಾಲಕ್ಷ್ಮಿ ಪೂಜೆಗೆ ಮಾತ್ರ ಶೀಮಿತವಾಗಿರದೆ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಅಭಿವೃದ್ಧಿಗೆ ಕೖೆಜೋಡಿಸುವಂತೆ ಹೇಳಿದ ಅವರು ಇಂದು ಪೂಜಾ ಸಮಿತಿಯಿಂದ ಸನ್ಮಾನ ಸ್ವೀಕರಿಸಲಿರುವ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ, ಸದಸ್ಯರು, ಪಟ್ಟೆ ಶ್ರೀಕೃಷ್ಣ ಅನುದನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ನಿಕಟ ಪೂರ್ವ ಗೌರವಾಧ್ಯಕ್ಷರು, ಸಾಹಿತ್ಯ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಶಂಕರಿ ನಾರಾಯಣ ಪಟ್ಟೆ ರವರನ್ನು ಮತ್ತು ನಮ್ಮೂರಿನ ಹೆಮ್ಮೆಯ ಪುತ್ರ ಆಗ್ನಿಪಥ್ ಗೆ ಆಯ್ಕೆಗೊಂಡ ಆಗ್ನಿವೀರರಾಗಿ ದೇಶ ಸೇವೆ ಸಲ್ಲಿಸುತ್ತಿರುವ ಅಭಿಷೇಕ್ ನಾಯಕ್ ರವರನ್ನು ಸನ್ಮಾನಿಸುವುದು ಅತ್ಯಂತ ಸಂತೋಷ ತಂದಿದೆ ಎಂದು ಹೇಳಿ ಶುಭ ಹಾರೖೆಸಿದರು. 

 ವೖೆದಿಕ ತಜ್ಞರಾದ ಸದಾಶಿವ ಭಟ್ ಪೖೆರುಪುಣಿ ರವರು ಮಾತನಾಡಿ, ಮಾತೆಯರು ಧನ್ಯತಾಭಾವದಿಂದ ಭಕ್ತಿ ಶ್ರದ್ದೆಯಿಂದ ಕರ್ಮಾಂಗವನ್ನು ಮಾಡಿದಾಗ ಪುಣ್ಯದ ಫಲ ದೊರೆಯುತ್ತದೆ ದೇವರನ್ನು ಭಯ ಭಕ್ತಿ ಪೂಜಿಸಿದಾಗ ನಮ್ಮ ಮನೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆ ಮೂಲಕ ತಾಯಿ ಸರ್ವೇಶ್ವರಿ ಎಲ್ಲರ ಮನೆ ಬೆಳಗುವಂತಾಗಲಿ ಅರ್ಶೀವಾದಿಸಿದರು.

ಪಡುಮಲೆ ಶ್ರೀ ಕೋಟಿ ಚೆನ್ನಯ ಪ್ರತಿಷ್ಠಾನ ಗೌರವಾಧ್ಯಕ್ಷ ನಾರಾಯಣ ರೈ ಕುದ್ಯಾಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆರಂಭಗೊಂಡ ವರಮಹಾಲಕ್ಷ್ಮಿ ಪೂಜೆ ಇಂದು 17 ವರ್ಷದ ಆಚರಣೆ ನಡೆಯುತ್ತಿದೆ ನಾನು. ಬೆಟ್ಟಂಪಾಡಿ ವಲಯ ಜನಜಾಗೃತಿ ಅಧ್ಯಕ್ಷನಾಗಿರುವ ಸಂಧರ್ಭದಲ್ಲಿ ಕುಂಜೂರು ಪಂಜದಲ್ಲಿ ನಡೆಯುತ್ತಿದ ವರಮಹಾಲಕ್ಷ್ಮಿ ಪೂಜೆ ಅಹ್ವಾನ ಮಾಡಿದ್ದರು. ಅದನ್ನು ನೋಡಿ ನಮ್ಮ ಊರಲ್ಲಿ ಇಂತಹ ಕಾರ್ಯಕ್ರಮ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಪ್ರಥಮ ಬಾರಿಗೆ ಆರಂಭಗೊಂಡಿತ್ತು ಆರಂಭದಲ್ಲಿ 1500ಕ್ಕೂ ಮಿಕ್ಕಿ ಪೂಜೆ ಸೇವೆ ನಡೆದಿದೆ. ತದನಂತರ ಸಮಿತಿ ರಚನೆ ಮಾಡಿಕೊಂಡು ಎಲ್ಲರ ಸಹಕಾರದಲ್ಲಿ ಉತ್ತಮವಾಗಿ ನಡೆಯುತ್ತಿದೆ ಮುಂದೆ ಇನ್ನಷ್ಟು ಹೆಚ್ಚು ಪೂಜೆ ನಡೆಯುವಂತಾಗಲಿ ಎಂದು ಹೇಳಿ ಶುಭ ಹಾರೖೆಸಿದರು.

ಸಭೆಯು ವರಮಹಾಲಕ್ಷ್ಮಿಪೂಜಾ ಸಮಿತಿ ಅಧ್ಯಕ್ಷೆ ಭಾರತಿ ರೈ ಕುದ್ಮಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. 

ವೇದಿಕೆಯಲ್ಲಿ ವರಮಹಾಲಕ್ಷ್ಮಿ ಪುಜಾ ಸಮಿತಿ ಗೌರವಾಧ್ಯಕ್ಷೆ ವಾಣಿಶ್ರೀ ಪಡುಮಲೆ ನಿಕಟಪೂರ್ವ ಗೌರವಾಧ್ಯಕ್ಷೆ ವೀಣಾ ಶ್ರೀನಿವಾಸ್ ಭಟ್ ಸಿ. ಹೆಚ್,, ವ್ಯವಸ್ಥಾಪನ ಸಮಿತಿ ಸದಸ್ಯರಗಳಾದ ಪುರಂದರ ರೈ ಕುದ್ಯಾಡಿ, ಶ್ರೀನಿವಾಸ ಗೌಡ ಕನ್ನಯ, ಶ್ರೀಮತಿ ಸುಳ್ಯಪದವು,ಗೋಪಾಲ ನಾಯ್ಕ ದೊಡ್ಡಡ್ಕ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ದಿ ಉಪಾಧ್ಯಕ್ಷೆ ರೇವತಿ ಕೋಡಿಯಡ್ಕ, ಜೊತೆ ಕಾರ್ಯದರ್ಶಿ ವಿನೋದ ರೈಸೇನೆರೆಮಜಲು, ಕೋಶಾಧಿಕಾರಿ ಸುನಿತಾ ರೈ ಮೇಗಿನಮನೆ ಗೌರವ ಸಲಹೆಗಾರಾದ ವೀಣಾ ಶ್ರೀನಿವಾಸ್ ಭಟ್ ಚಂದುಕೂಡ್ಲು, ಸುಶೀಲಾ ಕನ್ನಡ್ಕ ಸುಧಾ ಎಸ್ ರೈ ಕಟ್ಟಾವು ಶ್ರೀಮತಿ ಸುಳ್ಯಪದವು ಶಂಕರಿ ನಾರಾಯಣ ಪಟ್ಟೆ, ಸುಲೋಚನಾ ನೇರ್ಲಂಪಾಡಿ ಮಲ್ಲಿಕಾ ಕೋಡಿಯಡ್ಕ ಪ್ರೇಮ ಮೈಂದನಡ್ಕ ಯಶೋಧ ಆರ್ ಬಡಕ್ಕಾಯೂರು, ಪ್ರೇಮ ರೈ ಮೈಂದನಡ್ಕ, ರಮಾಕಾಂತಿ ಸುಳ್ಯಪದವು ,ಉಮಾವತಿ ಕಟ್ಟಾವು, ಸಾವಿತ್ರಿ ಪೆರಿಗೇರಿ,, ಸುಜಾತ ಏರಾಜೆ,ಸಂಚಾಲಕರಾದ ಮೋಹಿನಿ ರೈ ದೊಡ್ಡಡ್ಕ, ವಿಜಯಲಕ್ಷ್ಮಿನಾಯಕ್ ಪಡುಮಲೆ,ವಿಮಲಾ ನಾಯ್ಕ ತಲೆಂಜಿ, ಹೇಮಾವತಿ ಸಿಎಚ್, ಜಯಲಕ್ಷ್ಮಿ ರೖೆ ದೊಡ್ಡಡ್ಕ,ಕುಸುಮಾ ರೈ ಸುಳ್ಯಪದವು, ಪ್ರೇಮಲತಾ ನಲಿಕೆ ಮಜಲು, ನಿರ್ಮಲ ಬಡಕಯೂರು,ಹಾಗೂ ಸಮಿತಿ ಸದಸ್ಯರು ಮತ್ತು ಊರ ಭಕ್ತಾಧಿಗಳು ಭಾಗವಹಿಸಿದರು.

ಗೌರವ ಸಲಹೆಗಾರರಾದ ಸುಧಾ ಎಸ್ ರೈ ಕಟ್ಟಾವು ಪ್ರಾರ್ಥೀಸಿದರು. ಪೂಜಾ ಸಮಿತಿ ಕಾರ್ಯದರ್ಶಿ ಭವ್ಯ ವೇಣುಗೋಪಾಲ್ ಪಡುಮಲೆ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ  

ಪಟ್ಟೆ ಶ್ರೀಕೃಷ್ಣ ಅನುದನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ನಿಕಟ ಪೂರ್ವ ಗೌರವಾಧ್ಯಕ್ಷರು, ಹಾಗೂ ಸಾಮಾಜಿಕ, ಧಾರ್ಮಿಕ ಶೖೆಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರಸ್ತುತ ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನ ಸಮಿತಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಶಂಕರಿ ನಾರಾಯಣ ಪಟ್ಟೆ ಇವರನ್ನು ಪೂಜಾ ಸಮಿತಿ ವತಿಯಿಂದ ಪೇಟ ಧರಿಸಿ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. 

 

ಅಗ್ನಿವೀರ ಅಭಿಷೇಕ್ ನಾಯಕ್ ರವರಿಗೆ ಸನ್ಮಾನ : ಅಗ್ನಿಪಥ್ ಗೆ ಅಯ್ಕೆಯಾಗಿ ರಾಜಸ್ಥಾನದಲ್ಲಿ ಆಗ್ನಿವೀರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ ನಾಯಕ್ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರ ಅಭಿಷೇಕ್ ನಾಯಕ್ ಮೇಗಿನಮನೆ ಪಡುಮಲೆ ಇವರನ್ನು ಪೇಟ, ಧರಿಸಿ, ಶಾಲು ಹೊದಿಸಿ, ಹಾರ ಪಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು..

LEAVE A REPLY

Please enter your comment!
Please enter your name here