







ಪುತ್ತೂರು: ದ.ಕ.ಜಿ.ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇಂದ್ರಪ್ರಸ್ಥ ವಿದ್ಯಾಲಯ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 28 ರಂದು ನಡೆದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಕೌಶಿಕ್ ಯಸ್ ಆರ್ ಹಾಗೂ ಅನ್ವೇಷ್ ಪರ್ಪಲ ಸ್ಪರ್ಧಿಸಿ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.


ಅವರನ್ನು ಶಾಲಾ ಸಂಚಾಲಕರಾದ ರೆ.ವಿಜಯ ಹಾರ್ವಿನ್, ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಶುಭ ಹಾರೈಸಿ ಅಭಿನಂದಿಸಿರುತ್ತಾರೆ.













