ಪಿ.ವಸಂತ ಭಂಡಾರಿ, ಸಿದ್ದಾರ್ಥ್ ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ಅಗಲಿದ ದಿ.ಬಾಬು ಭಂಡಾರಿರವರ ಪುತ್ರ, ಶಶಿಕಲಾರವರ ಪತಿ, ಹರ್ಷಿತಾರವರ ತಂದೆ ಪಿ.ವಸಂತ ಭಂಡಾರಿ ಹಾಗೂ ಅರುಣಾ ಥಿಯೇಟರ್ ಬಳಿಯ ಮಹಾಲಕ್ಷ್ಮಿ ಕೋಲ್ಡ್ ಹೌಸ್ ಮಾಲಕ ಜಯಂತ್ ಭಂಡಾರಿ, ಶೋಭಾ ಭಂಡಾರಿರವರ ಪುತ್ರ ವಿಶೇಷಚೇತನ ಸಿದ್ದಾರ್ಥ್ ರವರ ಆತ್ಮಸದ್ಗತಿಗಾಗಿ ಶ್ರದ್ಧಾಂಜಲಿ ವಿಧಿವಿಧಾನ ಕಾರ್ಯಕ್ರಮ ಆ.29 ರಂದು ಅಪರಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.

ಪುತ್ತೂರು ಭಂಡಾರಿ ಸಮಾಜ ಸಂಘದ ಮಾಜಿ ಕಾರ್ಯದರ್ಶಿ ಜಗದೀಶ್ ಭಂಡಾರಿರವರು ಮಾತನಾಡಿ, ಕಣ್ಣು ಬಿಟ್ಟಾಗ ಜನನ, ಕಣ್ಣು ಮುಚ್ಚಿದಾಗ ಮರಣ, ಇವೆರಡರ ಮಧ್ಯೆ ಇರುವುದು ನಮ್ಮ ಜೀವನ. ಬದುಕಿರುವಷ್ಟು ದಿನ ಮನುಷ್ಯ ಹೇಗೆ ಜೀವಿಸಿರುತ್ತಾನೆ ಎಂಬುದು ತನ್ನ ಮರಣದ ನಂತರವೂ ಶಾಶ್ವತವಾಗಿ ಇರುತ್ತದೆ. ಬೊಳುವಾರುಬೈಲು ಬಾಬು ಭಂಡಾರಿರವರ ಮಗನಾಗಿ ಹುಟ್ಟಿ ಅವರೊಂದಿಗೆ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬಳಿಕ ಉದ್ಯೋಗ ನಿಮಿತ್ತ ಬೇರೆಬೇರೆ ಊರುಗಳಲ್ಲಿ ದುಡಿದು ಇದೀಗ ವಸಂತ ಭಂಡಾರಿರವರು ಅಗಲಿರುತ್ತಾರೆ. ಅಂಗವೈಕಲ್ಯ ಇದ್ದರೂ ಸಿದ್ಧಾರ್ಥ್ ರವರು ತನ್ನ ಮುಖದ ಭಾವನೆಯಿಂದಲೇ ಮನೆಗೆ ಆಗಮಿಸಿದವರನ್ನು ಸ್ವಾಗತಿಸುತ್ತಿದ್ದ. ಇದೀಗ ಅಗಲಿದ ಇವರೀರ್ವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ನಾವು ಪ್ರಾರ್ಥಿಸೋಣ ಎಂದು ಹೇಳಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಗಲಿದ ವಸಂತ ಭಂಡಾರಿರವರ ಪತ್ನಿ ಶಶಿಕಲ ಭಂಡಾರಿ, ಪುತ್ರಿ ಹರ್ಷಿತಾ, ಅಗಲಿದ ಸಿದ್ದಾರ್ಥ್ ರವರ ತಂದೆ ಜಯಂತ್ ಭಂಡಾರಿ, ತಾಯಿ ಶೋಭಾ ಭಂಡಾರಿ, ದಿ.ವಸಂತ ಭಂಡಾರಿರವರ ಸಹೋದರರು, ಸಹೋದರಿ, ಬಂಧುಮಿತ್ರರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here