







ಪುತ್ತೂರು: ನಿಧನರಾದ ಶತಾಯುಷಿ, ನಿವೃತ್ತ ತಹಶೀಲ್ದಾರ್ ಹಾಗೂ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಬಿ.ಎಸ್. ಕುಲಾಲ್ ಅವರ ಅಂತಿಮ ಸಾರ್ವಜನಿಕ ದರ್ಶನಕ್ಕೆ ಆ.30ರಂದು ಮಧ್ಯಾಹ್ನ 2.30ರಿಂದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಲ್ಲಿ ಅವಕಾಶ ಕಲ್ಪಿಸಲಾಗಿದೆ.


ಬಿ.ಎಸ್. ಕುಲಾಲ್ ಅವರ ಅಂತ್ಯಕ್ರಿಯೆ ಆ.30ರಂದು ಸಂಜೆ ಪುತ್ತೂರು ಸ್ಮಶಾನದಲ್ಲಿ ನಡೆಯಲಿದೆ. ಅಂತ್ಯಕ್ರಿಯೆಗೂ ಮುನ್ನ ಸಂಘದ ಆವರಣದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಬಹುದಾಗಿದೆ ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ತಿಳಿಸಿದ್ದಾರೆ.













