ಕಲ್ಲಡ್ಕ ಶ್ರೀಮಹಾಲಕ್ಷ್ಮಿ ಜ್ಯುವೆಲ್ ವರ್ಕ್ಸ್ ಮಳಿಗೆ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಲ್ಲಡ್ಕ ಗಣೇಶ್ ಕೃಪಾ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀಮಹಾಲಕ್ಷ್ಮಿ ಜ್ಯುವೆಲ್ ವರ್ಕ್ಸ್ ಮಳಿಗೆ ನವೀಕೃತಗೊಂಡು ಆ.28ರಂದು ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಶುಭಾರಂಭಗೊಂಡಿತು.


ಬೆಳಿಗ್ಗೆ ಗಣಹೋಮ, ಶ್ರೀ ಲಕ್ಷ್ಮೀ ಪೂಜೆ ನಡೆಯಿತು. ಮಾಜಿ ಶಾಸಕರಾದ ರುಕ್ಮಯ ಪೂಜಾರಿರವರು ದೀಪ ಬೆಳಗಿಸಿ ಮಳಿಗೆ ಉದ್ಘಾಟಿಸಿ ಶುಭಹಾರೈಸಿದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಮಹಾಲಕ್ಷ್ಮಿ ಸ್ವರ್ಣ ನಿಧಿ ಉಳಿತಾಯ ಯೋಜನೆ ಉದ್ಘಾಟಿಸಿ ಶುಭಹಾರೈಸಿದರು.

ಪದ್ಮನಾಭ ಕೊಟ್ಟಾರಿ, ಯತಿನ್ ಕುಮಾರ್, ಪಂಚಾಯತ್ ಸದಸ್ಯ ರಾಜೇಶ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಮಳಿಗೆಯ ಯಶಸ್ಸಿಗೆ ಶುಭಹಾರೈಸಿದರು.
ಮಳಿಗೆಯ ಮಾಲಕರಾದ ಸುಹಾಸ್ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ನವೀಕೃತಗೊಂಡ ಶೋರೂಮ್ ಹೊಸ ರೂಪದಲ್ಲಿ, ಹೊಸ ಮೆರುಗಿನಲ್ಲಿ ಬಂದಿದೆ. ನಿಮ್ಮ ಇಚ್ಚೆಯ ಆಭರಣಗಳನ್ನು ಆರ್ಡರ್ ಮೂಲಕ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಅಲ್ಲದೆ ನಮ್ಮಲ್ಲಿ ಮಹಾಲಕ್ಷ್ಮಿ ಸ್ವರ್ಣ ನಿಧಿ ಉಳಿತಾಯ ಯೋಜನೆ ಲಭ್ಯವಿದ್ದು ಪ್ರತೀ ತಿಂಗಳು ನಿಯಮಿತ ಉಳಿತಾಯದೊಂದಿಗೆ ಚಿನ್ನ ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು. ಮಾಲಕರ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here