ನೃತ್ಯೋಪಾಸನಾ ‘ನೃತ್ಯ ತರಂಗಿಣಿ-8’ ಪ್ರಸಾದನ ಕಾರ್ಯಾಗಾರ

0

ಪ್ರಸಾದನ ಎನ್ನುವುದು ವಿಶೇಷ ಕಲೆ: ಕಲಾಕಾರ ರಾಜೇಶ್‌ ವಿಟ್ಲ

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ನೃತ್ಯ ತರಂಗಿಣಿ-8’ ಪ್ರಸಾದನ ಕಾರ್ಯಾಗಾರ ಭಾನುವಾರ
ಇಲ್ಲಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಲಾಕಾರ ರಾಜೇಶ್‌ ವಿಟ್ಲ ಅವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಸಾದನ ಎನ್ನುವುದು ಒಂದು ವಿಶೇಷ ಕಲೆ, ನೃತ್ಯ ಕ್ಷೇತ್ರದಲ್ಲಿ ವಿಶೇಷ
ಬಣ್ಣಗಾರಿಕೆ ಅಥವಾ ಮೇಕಪ್‌ ವಿಧಾನ. ಇದನ್ನು ಕರಗತಮಾಡಿಕೊಳ್ಳುವುದು ಸುಲಭವಲ್ಲ. ಪ್ರತಿಯೊಬ್ಬ ನೃತ್ಯ ವಿದ್ಯಾರ್ಥಿಯೂ ಸ್ವತಃ ಮೇಕಪ್‌ ಮಾಡುವುದನ್ನು ತಿಳಿದುಕೊಂಡರೆ
ಉತ್ತಮ ಎಂದರು.


ಬಳಿಕ ಶಿಬಿರದಲ್ಲಿ ಮೇಕಪ್‌ ಮಹತ್ವ ಹಾಗೂ ವೈವಿಧ್ಯತೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಿಸಿದರು. ಮೇಕಪ್‌ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಟ್ಟರು. ಅಕಾಡೆಮಿ ಕಾರ್ಯದರ್ಶಿ ಆತ್ಮಭೂಷಣ್‌ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ನೃತ್ಯಗುರು ಶಾಲಿನಿ ಆತ್ಮಭೂಷಣ್‌ ಪ್ರಾಸ್ತಾವಿಕ ಮಾತನಾಡಿದರು. ಕೀರ್ತಿಕಾ ಪ್ರಾರ್ಥಿಸಿದರು. ಭಾರತಿ ಕಡಬ ನಿರೂಪಿಸಿದರು.

LEAVE A REPLY

Please enter your comment!
Please enter your name here