ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ರೂ.142 ಕೋಟಿ ವ್ಯವಹಾರ – ರೂ.12.5 ಲಕ್ಷ ಲಾಭ – ದಾಮೋದರ ಕುಲಾಲ್

ಪುತ್ತೂರು: ಕಲ್ಲಾರೆ ಶ್ರೀಮಹಾಲಕ್ಷ್ಮೀ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ.30ರಂದು ಸಂಘದ ಅಧ್ಯಕ್ಷರಾದ ದಾಮೋದರ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ವಾರ್ಷಿಕ ವರದಿ, ಲೆಕ್ಕಪತ್ರಗಳು, ಸಂಘದ ಪ್ರಗತಿ ಹಾಗೂ ಮುಂದಿನ ಸಾಲಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಯಿತು. ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೈಗೊಂಡಿರುವ ವಿವಿಧ ಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.ಸಂಘದ ಬೆಳವಣಿಗೆಯಲ್ಲಿ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಸಹಕಾರವನ್ನು ಸಹಕಾರಿ ಅಧ್ಯಕ್ಷರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸದಸ್ಯರ ಸಹಕಾರ ಅಗತ್ಯವೆಂದು ತಿಳಿಸಿ , 2025-26 ನೇಯ ಸಾಲಿನಲ್ಲಿ ಸಹಕಾರಿಯು ಒಟ್ಟು 142 ಕೋಟಿ ರೂಪಾಯಿ ವ್ಯವಹಾರ ನಡೆಸಿ , 12.5 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಘೋಷಣೆ ಮಾಡಿದ ಅವರು , ರೂಪಾಯಿ 10.5 ಕೋಟಿಯಷ್ಟೂ ಮೊತ್ತವನ್ನು ಸಾಲದ ರೂಪದಲ್ಲಿ ನೀಡಲಾಗಿದ್ದು ,ರೂಪಾಯಿ 9.4 ಕೋಟಿ ವಸೂಲಾತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದ್ದು , ಚಿನ್ನಾಭರಣಗಳ ಮೇಲೆ ಕಡಿಮೆ ಬಡ್ಡಿದರದಲ್ಲಿ ಗರಿಷ್ಠ ಸಾಲ ನೀಡುವಂತಹ ವ್ಯವಸ್ಥೆ , ಹೊಸ ವಾಹನಗಳ ಮತ್ತು ಹಳೇಯ ವಾಹನಗಳ ಖರೀದಿಗೆ ಸಾಲ ಸೌಲಭ್ಯ ವ್ಯವಸ್ಥೆ , ಎಲ್ಲಾ ರೀತಿಯ ಅಡಮಾನ ಸಾಲ ಹಾಗೂ ವೇತನಾಧಾರಿತ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ಗ್ರಾಹಕ ವರ್ಗಕ್ಕೆ ಕಲ್ಪಿಸಲಾಗಿದ್ದು , ಸಹಕಾರಿಯ ಸದಸ್ಯರಿದ್ದಲ್ಲಿಗೆ ಶೀಘ್ರವಾಗಿ ಸಾಲ ವಿತರಣೆ ಕಾರ್ಯವನ್ನು ಕೈಗೊಳ್ಳಲಾಗಿದೆಯೆಂದು ತಿಳಿಸಿ , ನೆಫ್ಟ್ ಆರ್ ಟಿ ಜಿ ಎಸ್ ಸೌಲಭ್ಯ ,
ಸದಸ್ಯರ ಮತ್ತು ಗ್ರಾಹಕರ ಪ್ರಯೋಜನಕ್ಕಾಗಿ ಇ ಸ್ಟಾಂಪ್ ಸೌಲಭ್ಯ , ವಾಹನ ವಿಮೆ, ಆರೋಗ್ಯ ವಿಮೆ, ಸೊತ್ತುಗಳ ಮೇಲಿನ ವಿಮೆ ಮತ್ತು ಅಪಘಾತ ವಿಮೆ ಮೊದಲಾದ ಸೇವೆ ಲಭ್ಯವಿದ್ದು ,ಶೀಘ್ರದಲ್ಲಿ ಸಿ ಎಸ್ ಸಿ ಕೇಂದ್ರ ಸ್ಥಾಪಿಸಿ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಸರಕಾರಿ ಸೇವೆಯನ್ನು ಪ್ರಾರಂಭಿಸಲಾಗುವುದು ಮತ್ತು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುವುದು
ಸದಸ್ಯರ ಸಹಕಾರದಿಂದ ನಮ್ಮ ಸಹಕಾರ ಸಂಘ ಉತ್ತಮ ಅಭಿವೃದ್ಧಿಹೊಂದಲು ಸಾಧ್ಯವಾಗಿದೆ ಇನ್ನು ಮುಂದೆಯೂ ಹೆಚ್ಚಿನ ಸಹಕಾರ ನೀಡಬೇಕಾಗಿ ವಿನಂತಿಸಿ , ವಂದಿಸಿದರು.


ಉಪಾಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿ , ನಿರ್ದೇಶಕರುಗಳಾದ ಭಾಸ್ಕರ ಎಂ , ವಸಂತ ಮೂಲ್ಯ, ಶೇಷಪ್ಪ ನಾಯ್ಕ ,ಹುಸೈನ್, ಶಂಕರನಾರಾಯಣ ಭಟ್, ಶಶಿಕಲಾ , ತುಂಗಮ್ಮ,ಹೇಮಾವತಿ, ಮತ್ತು ಕುಮಾರಿ ವಿದ್ಯಾ ಇದ್ದರು. ಸ್ವಸ್ತಿಕಾ ಪ್ರಾರ್ಥನೆ ನೆರವೇರಿಸಿ , ಕಾರ್ಯದರ್ಶಿ ಶರತ್ ಕುಮಾರ್ ಎ ನಿರೂಪಿಸಿ , ಮೇಘಾ ವಂದಿಸಿದರು.

LEAVE A REPLY

Please enter your comment!
Please enter your name here