







ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ಮಟ್ಟದ ಅನುಗ್ರಹ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಗೀತಾ ಇವರ ಅಧ್ಯಕ್ಷತೆಯಲ್ಲಿ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಆ.31 ರಂದು ಜರುಗಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದಶಿ ದೀಪಿಕಾ ಸಂತೋಷ್ ಅವರು ಕಳೆದ ಒಂದು ವರ್ಷದ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ವಾಚಿಸಿದರು.


ಒಳಮೊಗ್ರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭವ್ಯ ಅವರು ಒಕ್ಕೂಟದ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು. ಪುತ್ತೂರು ತಾಲೂಕು ವಲಯ ಮೇಲ್ವಿಚಾರಕಿ ನಮಿತಾ ಅವರು ಒಕ್ಕೂಟದ ಪದಾಧಿಕಾರಿಗಳ ಕರ್ತವ್ಯ, ಒಕ್ಕೂಟದಿಂದ ದೊರೆಯುವ ವಿವಿಧ ಸರಕಾರಿ ಯೋಜನೆಗಳು ಹಾಗೂ ಸಂಘದ ಲೆಕ್ಕಪರಿಶೋಧನೆಯ ಕುರಿತು ಸವಿವರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಿ.ಎಚ್.ಒ ವಿದ್ಯಾಶ್ರೀ ಅವರು ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಸಭೆಯಲ್ಲಿದ್ದ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆ ನಡೆಸಿಕೊಟ್ಟರು. ಎಫ್.ಎಲ್.ಸಿ ಗೀತಾ ಅವರು ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡಿದರು.




ವೇದಿಕೆಯಲ್ಲಿ ಪಿ.ಸಿ.ಎಚ್.ಒ ಪ್ರಮೀಳಾ, ಪಂಚಾಯತ್ ಕಾರ್ಯದರ್ಶಿ ಜಯಂತಿ, ಒಕ್ಕೂಟದ ಉಪಾಧ್ಯಕ್ಷೆ ಪದ್ಮಾವತಿ, ಜೊತೆ ಕಾರ್ಯದರ್ಶಿ ಮಲ್ಲಿಕಾ ಎಸ್ ರೈ, ಕೋಶಾಧಿಕಾರಿ ಸುಲೋಚನಾ ಹಾಗೂ ತಾಲೂಕು ಬಿ.ಆರ್.ಪಿ ಕವಿತಾ ಉಪಸ್ಥಿತರಿದ್ದರು. ಪಶು ಸಖಿ ಸವಿತಾ ಪ್ರಾರ್ಥಿಸಿದರು. ಕೃಷಿ ಸಖಿ ಉಷಾ ಕುಮಾರಿ ಸ್ವಾಗತಿಸಿದರು. ಎಲ್.ಸಿ.ಆರ್.ಪಿ ಚಂದ್ರಕಲಾ ಅವರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ವಾಚಿಸಿದರು. ಎಂ.ಬಿ.ಕೆ ಚಂದ್ರಿಕಾ ರೈ ಮೊಡಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ಎಲ್.ಸಿ.ಆರ್.ಪಿ ಸುನಿತಾ ವಂದಿಸಿದರು. ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸ್ವಚ್ಛತಾ ಸೇನಾನಿಗಳು ಹಾಗೂ ಸಂಘದ ಎಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.










