ಸುದಾನ ಶಾಲೆಯಲ್ಲಿ ವಿಜ್ಞಾನ ಮೇಳ

0

ಪುತ್ತೂರು :ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಐದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸೆಪ್ಟೆಂಬರ್ ಎರಡರಂದು ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಮತ್ತು ಡಾ ಎ ಪಿ ಜೆ ಅಬ್ದುಲ್ ಕಲಾಂ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಭಾವ ಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಅವರು ” ವಿಜ್ಞಾನ ಮೇಳದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗಾತ್ಮಕವಾಗಿ ತೊಡಗಿಸಿಕೊಳ್ಳುವ ಕ್ರಿಯಾಶೀಲತೆಯು ಶ್ಲಾಘನರ್ಹ. ಈ ವೈಜ್ಞಾನಿಕ ಮನೋಭಾವಕ್ಕೆ ಪೂರಕವಾದ ವಾತಾವರಣವು ಸಿಕ್ಕಿದಾಗ ಮಕ್ಕಳು  ಸಾಧಕರಾಗಲು ಸಾಧ್ಯ. ಇದಕ್ಕಾಗಿ ಸುದಾನ ಶಾಲೆಯು ಸದಾ ಸನ್ನದ್ಧವಾಗಿರುತ್ತದೆ” ಎಂದು ನುಡಿದರು. 

ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅವರು ಮಾತನಾಡುತ್ತಾ ” ವಿಜ್ಞಾನದ ಮಾದರಿಗಳನ್ನು ತಯಾರಿಸಲು ನಡೆಸುವ ಪ್ರಯತ್ನದಿಂದಾಗಿ ವಿದ್ಯಾರ್ಥಿಯಲ್ಲಿ ವೈಜ್ಞಾನಿಕ ಚಿಂತನೆಯು ಮೂಡುತ್ತದೆ. ಬಹುಮಾನಕ್ಕಿಂತಲೂ ಅನುಭವ ಮತ್ತು ಅರಿವು ಮುಖ್ಯ. ಭವಿಷ್ಯದಲ್ಲಿ ಮಾನವೀಯತೆಯನ್ನು ಮರೆಯದ ವಿಜ್ಞಾನದ ಆವಿಷ್ಕಾರಗಳು ಮೂಡಿಬರಲಿ”  ಎಂದು ಹಾರೈಸಿದರು.

ಸಂಯೋಜಕಿ ಪ್ರತಿಮಾ ಎನ್ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನವನೀತ್ ವಿಜ್ಞಾನ ಮೇಳದ ಉದ್ದೇಶ ಮತ್ತು ಎ ಪಿ ಜೆ ಅಬ್ದುಲ್ ಕಲಾಂ ಅವರ ಸಂಸ್ಮರಣೆಯ ಅಗತ್ಯವನ್ನು ವಿವರಿಸಿದರು, ವಿದ್ಯಾರ್ಥಿ ಆದಿತ್ಯ ಕಾರ್ಯಕ್ರಮವನ್ನು ನಿರೂಪಿಸಿದರು.  ವಿಜ್ಞಾನ ಶಿಕ್ಷಕರಾದ ನಿವೇದಿತಾ , ಪೂಜಾ ಎಂ ವಿ, ಶ್ಯಾಮಲಾ ಬಂಗೇರ,ರೀನಾ ಮತ್ತು ಟಿಂಕರ್ ಲ್ಯಾಬ್ ಶಿಕ್ಷಕ ಶಿವಪ್ರಸಾದ್ ಸಿ ಎಚ್ ಅವರು ತೀರ್ಪುಗಾರರಾಗಿ ಸಹಕರಿಸಿದರು. ಸುದಾನ ಶಾಲೆಯ ಅವನಿ ವಿಜ್ಞಾನ ಸಂಘವು  ವಿಜ್ಞಾನ ಶಿಕ್ಷಕಿ ರೇಖಾಮಣಿ ಮತ್ತು ರಂಜಿತಾ ಅವರ ನೇತ್ರತ್ವದಲ್ಲಿ  ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here