







ಪುತ್ತೂರು : ಬದ್ರಿಯಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕೌಡಿಚ್ಚಾರ್ ವತಿಯಿಂದ ಸೆ.4ರಂದು ಮೀಲಾದ್ ಕಾರ್ಯಕ್ರಮ ಆಯೋಜಿಸಲಾಗಿದೆ.


ಮಗ್ರಿಬ್ ನಮಾಜಿನ ಬಳಿಕ ಮದ್ರಸ ಮಕ್ಕಳ ಮಿಲಾದ್ ಜಲ್ಸಾ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಇಶಾ ನಮಾಜಿನ ಬಳಿಕ ಬೃಹತ್ ಮೌಲಿದ್ ಮಜ್ಲಿಸ್ ನಡೆಯಲಿದೆ.ಕಾರ್ಯಕ್ರಮದಲ್ಲಿ ಉಲಮಾ, ಉಮರಾ ಹಾಗೂ ಗಣ್ಯರು ಭಾಗವಹಿಸಲಿದ್ದು, ಹುಬ್ಬರಸೂಲ್ ಪ್ರಭಾಷಣ, ಆತ್ಮೀಯ ಮಜ್ಲಿಸ್, ದುವಾ ಕಾರ್ಯಕ್ರಮ ಮತ್ತು ಅನ್ನದಾನ ವಿತರಣೆ ಇರಲಿದೆ.ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತ ಸಮಿತಿ ಕೌಡಿಚ್ಚಾರ್ ತಿಳಿಸಿದೆ.













