






ಪುತ್ತೂರು: ಕುಂಬ್ರ ಶ್ರೀ ರಾಮಗಿರಿ ಶ್ರೀ ರಾಮ ಭಜನಾ ಮಂದಿರ ಇದರ ಆಶ್ರಯದಲ್ಲಿ ಸೆ. 04 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿಜೃಂಭಣೆಯಿಂದ ನಡೆಯಲಿದೆ. ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ವಿವಿಧ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಆಟೋಟಗಳು ಆಯೋಜನೆಗೊಂಡಿವೆ. ಮಧ್ಯಾಹ್ನ ಬಹುಮಾನ ವಿತರಣೆ ಹಾಗೂ ರಾತ್ರಿ 7:೦೦ ಗಂಟೆಯಿಂದ ವಿಶೇಷ ಭಜನಾ ಸೇವೆ ನಡೆಯಲಿದೆ.


ಆಕರ್ಷಕ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಶ್ರೀರಾಧೆ ವೇಷ ಸ್ಪರ್ಧೆ ನಡೆಯಲಿದ್ದು, ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ವೇಷ ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ ಹಾಜರಿರಬೇಕು. ಮಕ್ಕಳಿಗೆ: ಕಾಳು ಹೆಕ್ಕುವುದು, ಮಡಕೆ ಒಡೆಯುವುದು, ಸಂಗೀತ ಸ್ಪರ್ಧೆ, ಕಬಡ್ಡಿ, ನಿಂಬೆ ಚಮಚ ಓಟ, ಮಡಕೆಯನ್ನು ಟಯರ್ನಿಂದ ಮಗುಚುವುದು. ಮಹಿಳೆಯರಿಗೆ: ಹಗ್ಗಜಗ್ಗಾಟ (ಸ್ಥಳದಲ್ಲಿ ತಂಡ ರಚನೆ), ಸಂಗೀತ ಕುರ್ಚಿ, ಮಡಕೆ ಒಡೆಯುವುದು, ನಿಂಬೆ ಚಮಚ ಓಟ, ದೇವರ ಹೆಸರು ಹೇಳುವುದು, ಶಂಖ ಊದುವುದು. ಪುರುಷರಿಗೆ: ಮಡಕೆ ಒಡೆಯುವುದು, ಹಗ್ಗಜಗ್ಗಾಟ (ಸ್ಥಳದಲ್ಲಿ ತಂಡ ರಚನೆ), ಶಂಖ ಊದುವುದು, ದೇವರ ಹೆಸರು ಹೇಳುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.













