ಸೆ.6ಕ್ಕೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಹಾಸಭೆ – ಸಾಧಕರಿಗೆ ಸನ್ಮಾನ

0

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಜಿಲ್ಲೆಗಳಿಗೆ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ವಾರ್ಷಿಕ ಮಹಾಸಭೇಯು ಸೆ.6ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಭಾಭವನದಲ್ಲಿ ನಡೆಯಲಿದೆ.


ಸುದೀರ್ಘ 69 ವರ್ಷಗಳ ಇತಿಹಾಸ ಹೊಂದಿರುವ ಗ್ರಾಮೀಣ ಗುಡಿ ಕೈಗಾರಿಕೆಯಾದ ಕುಂಬಾರಿಕೆಯ ಅಭಿವೃದ್ದಿಗಾಗಿ ಸಹಕಾರಿ ಕ್ಷೇತ್ರದಲ್ಲಿ ತನ್ನ ಕಾರ್ಯ ಯೋಜನೆಯನ್ನು ರೂಪಿಸಿ ಬೆಳೆಸುತ್ತಿರುವ ಸಹಕಾರ ಸಂಘವು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 18 ಶಾಖೆಗಳನ್ನು ಹೊಂದಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಕುಂಬಾರಿಕಾ ಉತ್ಪಾದನಾ ತರಬೇತಿ ಕೇಂದ್ರವನ್ನು ಹೊಂದಿದ್ದು, ಈ ಭಾಗದ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸುತ್ತಿದೆ. ಸಹಕಾರ ಸಂಘವು ಎಲ್ಲ ವರ್ಗದ ಸದಸ್ಯರಿಗೆ ನೆರವನ್ನು ನೀಡುತ್ತಿದೆ. ಸದಸ್ಯರು ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಅವರು ತಿಳಿಸಿದ್ದಾರೆ.


ರೂ. 851 ಕೋಟಿ ವ್ಯವಹಾರ:
2025-26 ನೇ ಸಾಲಿನಲ್ಲಿ 851.42 ಕೋಟಿ ರೂಪಾಯಿ ವ್ಯವಹಾರವನ್ನು ದಾಖಲಿಸಿ 3.02 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ಸಂಘವು 154.99 ಕೋಟಿ ಠೇವಣಿಯನ್ನು ಹೊಂದಿರುತ್ತದೆ. ಲೆಕ್ಕ ಪರಿಶೋಧನೆಯಲ್ಲಿ ನಿರಂತರವಾಗಿ ಎ ದರ್ಜೆಯನ್ನು ಕಾಯ್ದುಕೊಂಡಿರುತ್ತದೆ. ಸಹಕಾರ ಸಂಘದ ಹೆಚ್ಚಿನ ಶಾಖೆಗಳನ್ನು ಹವಾನಿಯಂತ್ರಣಗೊಳಿಸಿ ಸುಸಜ್ಜಿತ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲಾಗುತ್ತಿದೆ. ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತಿದ್ದು, ಸದಸ್ಯರ ಠೇವಣಿಗಳಿಗೆ ಆಕರ್ಷಕ ದರದ ಬಡ್ಡಿಯನ್ನು ನೀಡಲಾಗುತ್ತಿದೆ. ಸಹಕಾರ ಸಂಘದ ಕೌಡಿಚ್ಚಾರಿನಲ್ಲಿ ಸಮುದಾಯ ಭವನ ರಚನೆಯ 3 ಡಿ ಯನ್ನು ಬಿಡುಗಡೆಗೊಳಿಸಲಾಗುವುದು. ಸಹಕಾರ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ತಿಳಿಸಿದ್ದಾರೆ.


ಮಹಾಸಭೆಯಲ್ಲಿ ಸಾಧಕರಿಗೆ ಸನ್ಮಾನ:
ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಕ್ಷೇತ್ರದ ಮಹಾನ್ ಸಾಧಕ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಶಶಿ ಕುಮಾರ್ ರೈ ಬಾಲ್ಯೊಟ್ಟು, ವೈದ್ಯಕೀಯ ಕ್ಷೇತ್ರದ ಸಾಧಕ ಡಾ ಸುರೇಶ್ ಪುತ್ತೂರಾಯ, ನಾಯುಕ್ ಸುಭೇದಾರ್ ಮೋಹನ ಕಡಂಬಾರ್, ಪುರುಷೋತ್ತಮ ಚೆಂಡ್ಲಾ, ಶ್ರೀಮತಿ ಡಾ ಜ್ಯೋತಿ ಚೆಲಾರು , ಶ್ರೀಮತಿ ಜ್ಯೋತಿ, ಕುಮಾರಿ ದೀಕ್ಷಾ ಡಿ ಎ, ಕುಮಾರಿ ಐಶ್ವರ್ಯ, ಕು ವಿದ್ಯಾ ಇವರುಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ತಿಳಿಸಿದ್ದಾರೆ.

ರೂ. 200ಕೋಟಿ ಹೆಚ್ಚಿನ ವ್ಯವಹಾರ, ರೂ. 38.27 ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹಣೆ, ನಿರಂತರ ಲಾಭದಲ್ಲಿ ಮುಂದುವರಿಕೆ, ಸದಸ್ಯರಿಗೆ ಗರಿಷ್ಟ ಲಾಭಾಂಶ ವಿತರಣೆ, ಸದಸ್ಯ ಸ್ನೇಹಿ ವಿಶ್ವಾಸಾರ್ಹತೆಯಿಂದ ಕೂಡಿದ ವ್ಯವಹಾರ ಗ್ರಾಮೀಣ ಕುಂಬಾರಿಕೆಯ ಉತ್ಪಾದನೆ ಹಾಗೂ ಮಾರಾಟಕ್ಕೆ ನಿರಂತರ ಪ್ರೋತ್ಸಹ, ಸದಸ್ಯ ಸ್ನೇಹಿ ಬ್ಯಾಂಕಿಂಗ್ ಸೇವೆ ನೀಡಿದುರರಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಲಭಿಸಿದ್ದು, ನಮ್ಮ ಸಹಕಾರ ಸಂಘವನ್ನು ಗುರುತಿಸಿ ಗೌರವಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಮ್ ಎನ್ ರಾಜೇಂದ್ರ ಕುಮಾರ್ ಹಾಗೂ ನಿರ್ದೇಶಕ ಶಶಿ ಕುಮಾರ್ ಬಾಲ್ಯೊಟ್ಟು ರವರಿಗೆ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಗೆ ನಮ್ಮ ಸಹಕಾರ ಸಂಘದ ಕೃತಜ್ಞತೆಗಳು ಸಲ್ಲಿಸುತ್ತಿರುವುದಾಗಿ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here