






ಪುತ್ತೂರು: ಶ್ರೀಸತ್ಯಸಾಯಿ ಸೇವಾ ಸಮಿತಿ ಮತ್ತು ಪ್ರಭಾಕರ್ ರಾವ್ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮದ `ಶ್ರೀಕೃಷ್ಣ ಕಾರುಣ್ಯ’ ಹರಿಕಥೆ ಸೆ.5ರಂದು ಕೋರ್ಟ್ ರಸ್ತೆಯಲ್ಲಿರುವ ಶ್ರೀಸತ್ಯಸಾಯಿ ಮಂದಿರದಲ್ಲಿ ನಡೆಯಲಿದೆ.
ಮಂಗಳೂರು ಆಕಾಶವಾಣಿ ಎ ಗ್ರೇಡ್ ಕಲಾವಿದೆ ಮಂಜುಳಾ ಜಿ. ರಾವ್ ಇರಾ ಅವರು ಹರಿಕಥೆ ನಡೆಸಿಕೊಡಲಿದ್ದು, ಹೃಷಿಕೇಶ್ ರಾವ್ ತಬಲಾ ಮತ್ತು ಸಾಯಿ ಸುಬ್ರಹ್ಮಣ್ಯ ಅವರು ಹಾರ್ಮೋನಿಯಂ ಮೂಲಕ ಸಹಕರಿಸಲಿದ್ದಾರೆ. ಆಸಕ್ತರು ಪಾಲ್ಗೊಳ್ಳಬಹುದು ಎಂದು ಟ್ರಸ್ಟ್ ಮತ್ತು ಸಮಿತಿಯ ಸಂಚಾಲಕರು, ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












