







ಪುತ್ತೂರು:ಮಠ ಯೂತ್ ಫೆಡರೇಷನ್ (ರಿ.) ವತಿಯಿಂದ ಸಮಾಜಮುಖಿ ಸೇವೆಯ ಅಂಗವಾಗಿ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಿರ್ತಡ್ಕ ಇಲ್ಲಿನ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಕಾರ್ಯಕ್ರಮವುಸೆ.4 ರಂದು ನಡೆಯಿತು.
ಈ ಸಂದರ್ಭದಲ್ಲಿ ಮಠ ಯೂತ್ ಫೆಡರೇಷನ್ ಅಧ್ಯಕ್ಷರಾದ ಸಿದ್ದಿಕ್ ಎಂ., ಪ್ರಧಾನ ಕಾರ್ಯದರ್ಶಿ ಬಸೀರ್ ಭಾರತ್, ಕೋಶಾಧಿಕಾರಿ ಮುಸ್ತಫಾ ಜೆ.ಎಂ., ಉಪಾಧ್ಯಕ್ಷರಾದ ಅರಫಾ ಮೋನು, ಸಲೀಂ, ನೂರುದ್ದೀನ್ ಸೇರಿದಂತೆ ಸಂಘಟನೆಯ ಇತರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಅಬ್ದುಲ್ ರಹಿಮಾನ್ (ಅಬ್ಬುವಾಚ), ಎಂ.ಬಿ. ನಜೀರ್ ಮಠ, ಅಬ್ದುಲ್ ರಹಿಮಾನ್ (ಮಾಜಿ ಪಂಚಾಯತ್ ಅಧ್ಯಕ್ಷರು, ಉಪ್ಪಿನಂಗಡಿ), ಅಬ್ದುಲ್ ರಶೀದ್ ಯು ಎಂ ಮಾಜಿ ಪಂಚಾಯತ್ ಸದಸ್ಯರು ಉಪ್ಪಿನಂಗಡಿ ಆದಮ್ ಕೊಪ್ಪಳ ಯೂಸುಫ್ ಸಬೀರ್ ಎಂಬಿ. ಹನೀಫ್ ಟಿ. ನಾಸಿರ್ ವೈ ಎನ್ ಕೆ ನೌಫಲ್ ಎನ್ ಎಂ ಮುಸ್ತಫ ಕೆ ಪಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರೀಫ್ ಬಡಗೆರೆ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯರು, ಶಿಕ್ಷಕ ವೃಂದ, ಊರಿನ ಹಿರಿಯರು ಮತ್ತು ಕಿರಿಯರು ಭಾಗವಹಿಸಿದ್ದರು.
ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವ ಇಂತಹ ಸೇವಾ ಕಾರ್ಯಗಳನ್ನು ಕೈಗೊಂಡಿರುವ ಮಠ ಯೂತ್ ಫೆಡರೇಷನ್‌ನ ಕಾರ್ಯವನ್ನು ಗಣ್ಯರು ಹಾಗೂ ಸಾರ್ವಜನಿಕರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿಯೂ ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವಾ ಕಾರ್ಯವನ್ನು ಮುಂದುವರಿಸಬೇಕೆಂದು ಶುಭ ಹಾರೈಸಿದರು.
ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಪ್ರತಿಯೊಂದು ಹೆಜ್ಜೆಯೂ ಸಮಾಜದ ಭವಿಷ್ಯವನ್ನು ಬಲಪಡಿಸುವ ಹೆಜ್ಜೆಯಾಗಿದೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.












