ನೆಲ್ಯಾಡಿ ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

ನೆಲ್ಯಾಡಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಕೇಂದ್ರ ಹಾಗೂ ರಾಜ್ಯ ಹಣಕಾಸು ಯೋಜನೆಯ 2026-27ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಸೆ.3ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಮೆಸ್ಕಾಂ ಆಲಂಕಾರು ಶಾಖಾ ಜೂನಿಯರ್ ಇಂಜಿನಿಯರ್ ಪ್ರೇಮ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಪರಿಶೋಧನೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಪವಿತ್ರ ಅವರು ಯೋಜನೆಯ ಕುರಿತು ಮಾಹಿತಿ ನೀಡಿ, ಸಾಮಾಜಿಕ ಪರಿಶೋಧನೆಯ ತಂಡ ನೆಲ್ಯಾಡಿ ಗ್ರಾ.ಪಂ.ನಲ್ಲಿ ನಡೆದ ಕಾಮಗಾರಿಗಳ ದಾಖಲೆ ಪರಿಶೀಲನೆ ಮಾಡಿದೆ. 1 ವರ್ಷದಲ್ಲಿ ನಡೆದ 94 ಕಾಮಗಾರಿಗಳ ಪೈಕಿ 74 ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದೆ. ಕೆಲವೊಂದು ಕಾಮಗಾರಿಗಳ ನಿರ್ವಹಣೆಯಲ್ಲಿ ಕಂಡು ಬಂದ ಲೋಪಗಳ ಬಗ್ಗೆ ಸಭೆಗೆ ತಿಳಿಸಿದರು. ಉದ್ಯೋಗ ಚೀಟಿ ಫಲಾನುಭವಿಗಳ ಕೈಯಲ್ಲೇ ಇರಬೇಕು. ನಿರ್ವಹಿಸಿದ ಕಾಮಗಾರಿಗಳಿಗೆ ನಾಮಫಲಕ ಅಳವಡಿಕೆ ಕಡ್ಡಾಯವಾಗಿದೆ ಎಂದು ತಿಳಿಸಿದ ಅವರು, 15ನೇ ಹಣಕಾಸು, ರಾಜ್ಯ ಹಣಕಾಸು ಯೋಜನೆಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರ ನೀಡಿದರು.

ನರೇಗಾದಲ್ಲಿ 34.26 ಲಕ್ಷ ರೂ.ಖರ್ಚು;
ನರೇಗಾ ಯೋಜನೆಯಲ್ಲಿ 1-4-2025ರಿಂದ 31-3-2026 ಅವಧಿಯ ತನಕ 94 ಕಾಮಗಾರಿ ಮಾಡಲಾಗಿದ್ದು ಇದಕ್ಕೆ 27,60,646 ರೂ.ಕೂಲಿ ಹಾಗೂ 6,66,009 ರೂ.ಸಾಮಾಗ್ರಿ ಮೊತ್ತ ಸೇರಿ 34,26,655 ರೂ.ಖರ್ಚು ಮಾಡಲಾಗಿದೆ. 189 ಕುಟುಂಬಗಳ 319 ಮಂದಿ ಕೆಲಸ ನಿರ್ವಹಿಸಿದ್ದು 7498 ಮಾನವ ದಿನ ಸೃಜನೆಯಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಅದೇ ರೀತಿ 15ನೇ ಹಣಕಾಸು ಯೋಜನೆಯಡಿ 61 ಕಾಮಗಾರಿಗಳಿಗೆ 39,39,339 ರೂ. ಖರ್ಚು, ರಾಜ್ಯ ಹಣಕಾಸು ಯೋಜನೆಯಡಿ ತಾ.ಪಂ.ನ 9,30,046 ರೂ.ಅನುದಾನದಲ್ಲಿ 4 ಕಾಮಗಾರಿ ಹಾಗೂ ಜಿ.ಪಂ.ನ 2,44,618 ರೂ.ಅನುದಾನದಲ್ಲಿ 2 ಕಾಮಗಾರಿ ನಿರ್ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಇಂಜಿನಿಯರ್ ಸವಿತಾ ಲೋಬೋ ಅವರು ಯೋಜನೆಯ ಕುರಿತು ಮಾಹಿತಿ ನೀಡಿದರು. ಇಂಜಿನಿಯರ್ ಮನೋಜ್, ತೋಟಗಾರಿಕೆ ಇಲಾಖೆಯ ವಿಖ್ಯಾತ್ ಅವರು ಉಪಸ್ಥಿತರಿದ್ದರು. ಪಿಡಿಒ ಜಯರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ಅನುಪಾಲನಾ ವರದಿ ವಾಚಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಸಾಮಾಜಿಕ ಪರಿಶೋಧನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ ಪಿ., ಪ್ರಣಮ್ಯ, ಪ್ರತಿಭಾ, ಸವಿತಾ, ರಮ್ಯ ಹಾಗೂ ಗ್ರಾ.ಪಂ.ಸಿಬ್ಬAದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here