






ಕಡಬ: ಆಪ್ಟಿಕಲ್ಸ್ ಕ್ಷೇತ್ರದಲ್ಲಿ 14 ವರ್ಷಗಳ ಅನುಭವ ಹೊಂದಿರುವ ಮಂಜುಳಾ ಅವರ ’ಶ್ರೀ ದೇವಿ ಆಪ್ಟಿಕಲ್ಸ್’ ಸಂಸ್ಥೆಯು ಸೆ. 10ರಂದು ಬೆಳಗ್ಗೆ 8 ಗಂಟೆಗೆ ಆಲಂಕಾರು ಶ್ರೀ ದುರ್ಗಾನುಗ್ರಹ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ.


ಕಡಬದಲ್ಲಿ ಹಲವು ವರ್ಷಗಳಿಂದ ಶ್ರೀ ದುರ್ಗಾ ಆಪ್ಟಿಕಲ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯನ್ನು ಇದೀಗ ಆಲಂಕಾರಿಗೆ ಸ್ಥಳಾಂತರಿಸಲಾಗುತ್ತಿದ್ದು, ಇನ್ನು ಮುಂದೆ ಆಲಂಕಾರಿನಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ. ವಾರದಲ್ಲಿ ಒಂದು ದಿನ ಮಂಗಳೂರಿನ ಪ್ರಸಿದ್ಧ ಕಣ್ಣಿನ ಸರ್ಜನ್ ಇಲ್ಲಿಗೆ ಭೇಟಿ ನೀಡುತ್ತಾರೆ. ಶ್ರೀ ದೇವಿ ಆಪ್ಟಿಕಲ್ಸ್ನ ಮಂಜುಳಾ ಅವರು ಉಪ್ಪಿನಂಗಡಿ ಹಾಗೂ ಬೆಳ್ತಂಗಡಿಯಲ್ಲಿಯೂ ಕಣ್ಣಿನ ದೃಷ್ಟಿ ಪರೀಕ್ಷೆ ಹಾಗೂ ಕನ್ನಡಕಗಳ ಸೇವೆ ನೀಡುತ್ತಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ಸೇವೆ ಹಾಗೂ ಕೈಗೆಟುಕುವ ದರದಲ್ಲಿ ಉತ್ತಮ ಕನ್ನಡಕಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಶುಭಾರಂಭದ ಪ್ರಯುಕ್ತ ಉಚಿತ ಕಣ್ಣಿನ ದೃಷ್ಟಿ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ಆಕರ್ಷಕ ಹಾಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಕನ್ನಡಕಗಳನ್ನು ತಯಾರಿಸಿ ಕೊಡಲಾಗುವುದು. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಕುರಿತು ಗ್ರಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಮಾಲಕಿ ಮಂಜುಳಾ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9945097054 ಸಂಪರ್ಕಿಸಬಹುದಾಗಿದೆ.













