ಕೊಯಿಲ: ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ, ಧಾರ್ಮಿಕ ಸಭೆ

0

ರಾಮಕುಂಜ; ಕೊಯಿಲ-ರಾಮಕುಂಜ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ, ಧಾರ್ಮಿಕ ಸಭೆ ಸೆ.6ರಂದು ಕೊಲ ಗ್ರಾ.ಪಂ ವಠಾರದಲ್ಲಿ ನಡೆಯಿತು.


ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ|ಈಶ್ವರ ಗೌಡ ಕುಂತೂರು ಅವರು, ಚೈತ್ಯನ್ಯ ಸ್ವರೂಪಿ ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಪಾಲನೆಯಿಂದ ಹಿಂದೂ ಧರ್ಮದ ಉಳಿವು ಸಾಧ್ಯ. ಧರ್ಮ ಸಂಘಟನೆಯ ಚಿಂತನೆಯೊಂದಿಗೆ ಸಾಮೂಹಿಕವಾಗಿ ಆಚರಿಸಲ್ಪಡುವ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದಿಂದ ಧರ್ಮದ ಸದ್ವಿಚಾರ ಉದ್ದೀಪನಗೊಳುತ್ತದೆ ಎಂದರು. ಆತೂರು ಶ್ರೀ ಸದಾಶಿವ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಆರ‍್ವಾರ ಬಾಳಿಕೆ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ ಶುಭಹಾರೈಸಿದರು. ಉತ್ಸವ ಸಮಿತಿ ಅಧ್ಯಕ್ಷ ಕೆ.ಟಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಕಾಳಪ್ಪ ಗೌಡ ಬರಮೇಲು, ಕೊಲ ಜಾನುವಾರು ಸಂವರ್ಧನಾ ಕೇಂದ್ರದ ನಿವೃತ್ತ ಸಿಬ್ಬಂದಿ ಧನಂಜಯ ಸಪಲ್ಯ, ನಿವೃತ್ತ ಆಶಾ ಕಾರ್ಯಕರ್ತೆ ಪುಷ್ಪಾ ಕೊನೆಮಜಲು, ನಿವೃತ್ತ ಪ್ರಾಧ್ಯಾಪಕ ಡಾ|ಈಶ್ವರ ಗೌಡ ಕುಂತೂರು ಅವರುಗಳನ್ನು ಸನ್ಮಾನಿಸಲಾಯಿತು.


ಉತ್ಸವದ ಪ್ರಯುಕ್ತ ಪುಟಾಣಿಗಳಿಗೆ ಶ್ರೀಕೃಷ್ಣ ವೇಷ ಸೇರಿದಂತೆ ವಿವಿಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಣೇಶ್ ಕೇದಗೆದಡಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಾಮನ ಬರಮೇಲು ವರದಿ ವಾಚಿಸಿದರು. ಸುದೀಶ್ ಪಟ್ಟೆ ಸನ್ಮಾನಿತರನ್ನು ಪರಿಚಯಿಸಿದರು. ಮೋಹನ್ ದಾಸ್ ಶೆಟ್ಟಿ ಬಡಿಲ ಸ್ವಾಗತಿಸಿದರು. ದೀಕ್ಷೀತ್ ಪೂರಿಂಗ ವಂದಿಸಿದರು. ಪ್ರಕಾಶ್ ಕೆಮ್ಮಾರ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here