






ನೆಟ್ಟಣಿಗೆ ಮೂಡ್ನೂರು: ಪುತ್ತೂರು ಗ್ರಾಮಾಂತರ ವಲಯ ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮೂಡ್ನೂರು, ಕರ್ನೂರು ಇಲ್ಲಿ ಜರಗಿತು.


ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ರಘು ಎಸ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಸೋಲು ಮತ್ತು ಗೆಲುವು ಕ್ರೀಡಾಪಟುವಿನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಬ್ಬಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕಿ ಸಿಲ್ವಿಯಾ ಕ್ಯಾಸ್ಟಲಿನೊ, ಮಾಜಿ ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಮಾಜಿ ಸದಸ್ಯರಾದ ಶ್ರೀರಾಮ್ ಪಕ್ಕಳ, ಕುಮಾರನಾಥ ಪೂಜಾರಿ, ಹಿರಿಯರಾದ ಮೊಹಮ್ಮದ್ ಬೆದ್ರಾಡಿ, ಸೀನಾ ಎಂ. ಉಪಸ್ಥಿತರಿದ್ದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್. ಸೂಪಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ರಮೇಶ್ ಶಿರ್ಲಾಲ್ ಸ್ವಾಗತಿಸಿದರು, ಶಿಕ್ಷಕಿ ಪ್ರವೀಣ ಕುಮಾರಿ ನಿರೂಪಿಸಿದರು, ವಿಜೇತಾ ವಂದಿಸಿದರು. ಶಿಕ್ಷಕಿಯರಾದ ಹಲೀಮ, ನಜ್ಮುನ್ನಿಸಾ, ಸಾವಿತ್ರಿ ಕೆ, ಭವ್ಯ ಎಂ, ಬಿಂದು ಕೆ.ಎಸ್, ಅಸ್ಮಾ ಕೆ.ಪಿ, ಲತಾ ರಮೇಶ್ ಸಹಕರಿಸಿದರು.



ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಚ್. ಸೂಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀರಾಮ ಮೇನಾಲ, ಮಾಜಿ ಪಂಚಾಯತ್ ಸದಸ್ಯ ಪ್ರದೀಪ್ ಕುಮಾರ್ ರೈ, ಯುನೈಟೆಡ್ ಕಿಂಗ್‌ಡಮ್ ಮಾರ್ಕೆಟಿಂಗ್ ಮ್ಯಾನೇಜರ್ ಇಬ್ರಾಹಿಂ ಬಾತಿಷ್ ಅಲಾಬಿ, ನಿವೃತ್ತ ಮುಖ್ಯಗುರು ಮಹಾಬಲ ರೈ ಪಂಜಿಕಲ್ಲು, ಪಂಚಲಿಂಗೇಶ್ವರ ಹೈಸ್ಕೂಲ್‌ನ ಮುರಳಿಮೋಹನ ಶೆಟ್ಟಿ, ಸರ್ವೋದಯ ಸುಳ್ಯಪದವಿನ ಸುಕೇಶ್ ರೈ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸಂಗೀತ ರೈ ಉಪಸ್ಥಿತರಿದ್ದರು.
ಶಾಲೆಯ ಮುಖ್ಯಗುರು ರಮೇಶ್ ಶಿರ್ಲಾಲ್ ಅತಿಥಿಗಳನ್ನು ಸ್ವಾಗತಿಸಿ, ದಾನಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.ಶಿಕ್ಷಕಿ ಕುಮಾರಿ ವಿಜೇತಾ ವಿಜೇತರ ಪಟ್ಟಿ ವಾಚಿಸಿದರು.ಶ್ರೀರಾಮ ಮೇನಾಲ ಅವರು ಶಾಲೆಯ ಸಾಧನೆ ಹಾಗೂ ಕಬಡ್ಡಿಯಲ್ಲಿ ಮಕ್ಕಳ ರಾಷ್ಟ್ರಮಟ್ಟದ ಸಾಧನೆಯನ್ನು ಶ್ಲಾಘಿಸಿ ವಿಜೇತರಿಗೆ ಹುರಿದುಂಬಿಸಿದರು.
ಇಬ್ರಾಹಿಂ ಬಾತಿಷ್ ಅಲಾಬಿ ಅವರು ಸೋಲು-ಗೆಲುವು ಸಹಜ, ಪ್ರಯತ್ನವೇ ಕ್ರೀಡಾ ಸ್ಫೂರ್ತಿ ಆಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು. ಸುಬೋಧ ಪ್ರೌಢಶಾಲೆ ಪಾಣಾಜೆಯ ಸುಧೀರ್ ರೈ ಅವರು ಮಕ್ಕಳ ಶ್ರಮದಿಂದ ಕ್ರೀಡೆಯಲ್ಲಿ ಮುಂದುವರೆಯಲು ಸಾಧ್ಯ ಎಂದು ಹೇಳಿ ಕರ್ನೂರು ಶಾಲೆಯ ಸಾಧನೆಯನ್ನು ಮೆಚ್ಚಿಕೊಂಡರು.
ಕಾರ್ಯಕ್ರಮವನ್ನು ಶಿಕ್ಷಕಿ ಲತಾ ರಮೇಶ್ ನಿರೂಪಿಸಿದರು, ಶಿಕ್ಷಕಿ ಪ್ರವೀಣಾ ಕುಮಾರಿ ಧನ್ಯವಾದಗೈದರು.ಶಿಕ್ಷಕಿಯರಾದ ಹಲೀಮ, ನಜ್ಮುನ್ನಿಸಾ, ಸಾವಿತ್ರಿ ಕೆ, ಬಿಂದು ಕೆ.ಎಸ್, ಅಸ್ಮಾ ಕೆ.ಪಿ, ಭವ್ಯ ಎಂ ಸಹಕರಿಸಿದರು.

ಪುತ್ತೂರು ಗ್ರಾಮಾಂತರ ವಲಯ ಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟದ ಫಲಿತಾಂಶ
ಬಾಲಕರ ವಿಭಾಗದಲ್ಲಿ ಸುಬೋಧ ಪ್ರೌಢಶಾಲೆ ಪಾಣಾಜೆ ಪ್ರಥಮ, ಪಂಚಲಿಂಗೇಶ್ವರ ಹೈಸ್ಕೂಲ್ ದ್ವಿತೀಯ ಸ್ಥಾನ ಪಡೆದಿದೆ.ಬಾಲಕಿಯರ ವಿಭಾಗದಲ್ಲಿ ಬಾಲಸುಬ್ರಮಣ್ಯ ಪ್ರೌಢಶಾಲೆ ಸುಳ್ಯಪದವು ಪ್ರಥಮ, ಸರ್ವೋದಯ ಪ್ರೌಢಶಾಲೆ ಸುಳ್ಯಪದವು ದ್ವಿತೀಯ ಸ್ಥಾನ ಪಡೆದಿದೆ.










