ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ವಲಯ ಮಟ್ಟದ ಖೋ – ಖೋ ಸ್ಪರ್ಧೆ

0

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ, ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ – ಇವುಗಳ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ 17ರ ವಯೋಮಾನದ ಬಾಲಕ – ಬಾಲಕಿಯರ ಖೋ-ಖೋ ಪಂದ್ಯಾಟ ನಡೆಯಿತು.

ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷರಾದ ರವಿಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಬಾಲವಿಕಾಸ ವಿದ್ಯಾ ಸಂಸ್ಥೆ ಸಂಚಾಲಕರಾದ ಜೆ. ಪ್ರಹ್ಲಾದ ಶೆಟ್ಟಿ, ಶಾಲಾ ಸಂಚಾಲಕರಾದ ಹಾಜಿ ಕೆ. ಇಬ್ರಾಹಿಂ, ಆಡಳಿತ ಮಂಡಳಿ ಸದಸ್ಯರಾದ ಸನತ್ ಕುಮಾರ್ ಜೈನ್, ಕುಶಲ ಎಂ. ಪೆರಾಜೆ, ಬಾಲಕೃಷ್ಣ ಆಳ್ವ, ನಿವೃತ್ತ ಮುಖ್ಯ ಶಿಕ್ಷಕರಾದ ಬಿ.ಕೆ. ಭಂಡಾರಿ, ವಲಯ ದೈ. ಶಿ. ನೋಡಲ್ ಜಗದೀಶ್ ಬಾಳ್ತಿಲ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರುಗಳಾದ ಮೆಲ್ವಿನ್ ಕಿಶೋರ್ ಮಾರ್ಟಿಸ್ , ಕೃತಿಕ, ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಸಾರಿಕಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲ್ಲಡ್ಕ ವಲಯ ಮಟ್ಟದಲ್ಲಿ ಸತತ 25 ವರ್ಷಗಳಿಂದ ಚಾಂಪಿಯನ್ ತಂಡ ಕಟ್ಟಿದ ಸ. ಹಿ. ಪ್ರಾ. ಶಾಲೆ ಕಡೇಶಿವಾಲಯದ ದೈಹಿಕ ಶಿಕ್ಷಕರಾದ ಭಾಸ್ಕರ್ ನಾಯ್ಕ್ ರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭ:
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ದೈಹಿಕ ಶಿಕ್ಷಕರಾದ ಪಿ. ಗಂಗಾಧರ ರೈ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು.

ಶ್ರೀ ರಾಮ ಪ್ರೌಢ ಶಾಲೆ ಪ್ರಥಮ, ಸ. ಪ್ರೌ. ಶಾಲೆ ಕಡೇಶಿವಾಲಯ ದ್ವಿತೀಯ (ಬಾಲಕರ) ಸ. ಪ್ರೌ ( ಮಾದರಿ) ಶಾಲೆ ಕಲ್ಲಡ್ಕ – ಪ್ರಥಮ, ಶ್ರೀ ರಾಮ ಆಂಗ್ಲ ಮಾಧ್ಯಮ ಕಲ್ಲಡ್ಕ ದ್ವಿತೀಯ (ಬಾಲಕಿಯರ)
ತಂಡಗಳು ಜಯಗಳಿಸಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಸ್ವಾಗತಿಸಿ, ಹಿರಿಯ ಶಿಕ್ಷಕ ಎನ್. ಗಂಗಾಧರ ಗೌಡ ವಂದಿಸಿದರು. ಹಿಂದಿ ಶಿಕ್ಷಕರಾದ ಜಯರಾಮ್ ಕಾಂಚನ ಹಾಗೂ ಸುಶ್ಮಿತಾ ಎ. ವಿ. ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಕರಾದ ಮಹೇಶ್ ಶೆಟ್ಟಿ ಜನಾರ್ಧನ ಬಿಳಿಯೂರು ಸಹಕರಿಸಿದರು.

LEAVE A REPLY

Please enter your comment!
Please enter your name here