ಚಂದ್ರಶೇಖರ ಸುಳ್ಯಪದವು ಅವರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ತಜ್ಞ ಪ್ರಶಸ್ತಿ-ಸನ್ಮಾನ

0

ಬಡಗನ್ನೂರು: ಸಿರಿಗನ್ನಡ ಫೌಂಡೇಶನ್, ಬಿ ನ್ಯೂಸ್ ಪತ್ರಿಕೆ ಹಾಗೂ ವಾಹಿನಿ ಸಹಯೋಗದಲ್ಲಿ ಸೆ.6ರಂದು ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ಹಬ್ಬದ ಕಾರ್ಯಕ್ರಮದಲ್ಲಿ ಪುತ್ತೂರು ತೆಂಕಿಲ ಕನ್ನಡ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಅವರಿಗೆ 2026ನೇ ಸಾಲಿನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ತಜ್ಞ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವ ವೆಂಕಟೇಶ್ವರ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಲಕ್ಷ್ಮಿ ಟಿ.ಎನ್, ಯಲಹಂಕ ಉ.ಕ.ಕ್ಷೇ.ಸಂಘದ ಉಪಾಧ್ಯಕ್ಷ ವಿಶ್ವನಾಥ ಎಚ್, ಹಾಸ್ಯ ಉಪನ್ಯಾಸಕ ಉಮೇಶ್ ಡಿ.ಗೌಡ, ಮೈಸೂರು ಮುಕ್ತ ವಿವಿ ಸಹ ಪ್ರಾಧ್ಯಾಪಕ ಡಾ.ಟಿ.ಎಸ್.ಹರ್ಷ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಭಾರತಿ ಜೀ, ಧಾರವಾಡದ ಸಾದನಕೇರಿ ಸರ್ಕಾರಿ ಆದರ್ಶ ಪಿಯು ಕಾಲೇಜಿನ ಪ್ರಾಚಾರ್ಯ ನಂದೀಶ ಕಾಖಂಡಕಿ, ಕೃಷ್ಣಗಿರಿ ನಲಂದಾ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲಾ ಶಿಕ್ಷಕ ಅಂತೋಣಿ ಮುತ್ತು, ಶಾಂಭವಿ ಅಜಯ ವಣ್ಣೂರು, ಚಿತ್ರೋದ್ಯಮ ಪತ್ರಿಕೆ ಸಂಪಾದಕ ಡಾ.ಸುರೇಶ್ ಟಿ.ಎನ್, ಸಿರಿಗನ್ನಡ ಫೌಂಡೇಶನ್ ಮುಖ್ಯ ಸಲಹೆಗಾರ ರಾಜೇಂದ್ರಕುಮಾರ ಮಠ, ಉಪನ್ಯಾಸಕಿ ಡಾ.ಜಿ.ಪ್ರೇಮಾ, ಸುವರ್ಣಾ ಲಿಗಾಡೆ, ಅಪೂರ್ವಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here