ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರೀಮಾ ಕೆ ಎಚ್ ಯೋಗಾಸನದಲ್ಲಿ ವಿಭಾಗ ಮಟ್ಟಕ್ಕೆ

0

ಕಾಣಿಯೂರು: ಶಿಕ್ಷಣ ಇಲಾಖಾ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಳ್ಯದಲ್ಲಿ ನಡೆದ ಜಿಲ್ಲಾ ಮಟ್ಟದ 17 ರ ವಯೋಮಾನದ ಬಾಲಕಿಯರ ಯೋಗಾಸನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಶ್ರೀಮಾ ಕೆ ಎಚ್ (10ನೇ) ಆರ್ಟಿಸ್ಟಿಕ್ ಸಿಂಗಲ್ ಯೋಗಾಸನ ಮತ್ತು ಸಾಂಪ್ರದಾಯಿಕ ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತ ದಂಪತಿಗಳ ಪುತ್ರಿ.

14ರ ವಯೋಮಾನದ ಬಾಲಕಿಯರ ಆರ್ಟಿಸ್ಟಿಕ್ ಜೋಡಿ ಯೋಗಾಸನದಲ್ಲಿ ವನ್ಶಿ ಕೆ ಎಂ (8ನೇ) ಮತ್ತು ಧೃತಿ ಎ (7ನೇ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ವಿಜೇತರನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ- ಶಿಕ್ಷಕರೇತರ ವೃಂದದವರು ಮತ್ತು ವಿದ್ಯಾರ್ಥಿ ಮಿತ್ರರು ಅಭಿನಂದಿಸಿದರು.



ಇವರನ್ನು ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಕೆ ತರಬೇತುಗೊಳಿಸಿದರು. ಪೋಷಕ ಬಂಧು ಸುಜಿತ್ ರೈ ಎಣ್ಮೂರುಪಟ್ಟೆ ಮತ್ತು ಶಿಕ್ಷಕಿ ಅನಿತಾ ಎಸ್ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here