







ಪುತ್ತೂರು:ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಆಡಳಿತ ಸಿಬ್ಬಂದಿ ಫೆಲಿಕ್ಸ್ ಡಿ’ಸೋಜ(67ವ.)ರವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.9 ರಂದು ನಿಧನ ಹೊಂದಿದ್ದಾರೆ.


ಮೃತ ಫೆಲಿಕ್ಸ್ ಡಿ’ಸೋಜರವರು ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿ ಎರಡು ದಿನದ ಹಿಂದೆ ಬಿಕರ್ನಕಟ್ಟೆ ತನ್ನ ಮನೆಗೆ ಮರಳಿದ್ದರು. ಸೆಪ್ಟೆಂಬರ್ 8 ರಂದು ಕ್ರೈಸ್ತ ಬಾಂಧವರು ತೆನೆ ಹಬ್ಬವನ್ನು ಆಚರಿಸಿದ್ದು ರಾತ್ರಿ ಹೊಸ ಅಕ್ಕಿ ಊಟವನ್ನು ಕುಟುಂಬ ಸಮೇತ ಅವರು ಸವಿದಿದ್ದರು. ಮರುದಿನ ಬೆಳಿಗ್ಗೆ ಮನೆಯಲ್ಲಿ ಕುಸಿದು ಬಿದ್ದಿದ್ದರೆನ್ನಲಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸು ನೀಗಿರುತ್ತಾರೆ.
ಮೃತ ಫೆಲಿಕ್ಸ್ ರವರು ಸರಕಾರಿ ಉದ್ಯೋಗಿಯಾಗಿದ್ದು ಸಂತ ಫಿಲೋಮಿನಾ ಪದವಿ ಕಾಲೇಜು ಬಳಿಕ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವೃತ್ತಿ ಸಂದರ್ಭದಲ್ಲಿ ಇವರು ಕಾವೇರಿಕಟ್ಟೆಯಲ್ಲಿ ನೆಲೆಸಿದ್ದ ಸೋಜಾ ಹಾಸ್ಟೆಲ್ ಅನ್ನು ನಡೆಸುತ್ತಿದ್ದರು ಮಾತ್ರವಲ್ಲ ಮಾಯಿದೆ ದೇವುಸ್ ಚರ್ಚ್ ನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸಕ್ರಿಯ ಸದಸ್ಯರಾಗಿದ್ದರು.



ಮೃತ ಫೆಲಿಕ್ಸ್ ಡಿ’ಸೋಜರವರು ಪತ್ನಿ ನಿವೃತ್ತ ಶಿಕ್ಷಕಿ ವಾಯಿಲೆಟ್ ಸಿಕ್ವೇರಾ, ಪುತ್ರರಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ವಿಜಯ್ ಮ್ಯಾಕ್ಸಿಂ ಡಿ’ಸೋಜ, ಮಂಗಳೂರಿನ ಆಕ್ಸಿಸ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿರುವ ಮಾರ್ಕ್ ವಿಶ್ವಾಸ್ ಡಿ’ಸೋಜ, ಪುತ್ರಿಯರಾದ ವಿನಿಶಾ ಫೆಲ್ಸಿಟ ಡಿ’ಸೋಜ ವಾಮಂಜೂರು, ವಿಯೋಲಿನ್ ಲುಸಿಟ ಡಿ’ಸೋಜ ದುಬೈ ಸೊಸೆಯಂದಿರಾದ ಸುಶ್ಮಿತಾ ರೇಚಲ್ ಪಿಂಟೊ, ವೆನಿಶಾ ಶನಲ್ ಡಿ’ಸೋಜ, ಅಳಿಯ ಜೋಯಲ್ ತಾವ್ರೋರವರನ್ನು ಅಗಲಿದ್ದಾರೆ.










