ಸುಳ್ಯ ತಾಲೂಕು ಮಟ್ಟದ ಫುಟ್‌ಬಾಲ್: ಬಾಲಕರ ವಿಭಾಗದಲ್ಲಿ ಗ್ರೀನ್ ವ್ಯೂ ಚಾಂಪಿಯನ್, ಬಾಲಕಿಯರಲ್ಲಿ ಕೆಪಿಎಸ್ ಸುಳ್ಯ ಪ್ರಥಮ

0

ಸುಳ್ಯ: ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕೆಪಿಎಸ್ ಸ್ಕೂಲ್ ಗಾಂಧಿನಗರದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಫುಟ್‌ಬಾಲ್ ಪಂದ್ಯಾಟ ಗಾಂಧಿನಗರ ಕ್ರೀಡಾಂಗಣದಲ್ಲಿ ನಡೆಯಿತು.

ರೋಚಕ ಫೈನಲ್‌ನಲ್ಲಿ ಗ್ರೀನ್ ವ್ಯೂ ಪ್ರೌಢಶಾಲೆ 1-0 ಅಂತರದಿಂದ ಸೈಂಟ್ ಜೋಸೆಫ್ ಪ್ರೌಢಶಾಲೆಯನ್ನು ಮಣಿಸಿ ಚಾಂಪಿಯನ್ ಆಗಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲೆ ತಂಡ ಕೆಪಿಎಸ್ ಗಾಂಧಿನಗರ ತಂಡವನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆಯಿತು. ಕೆಪಿಎಸ್ ಗಾಂಧಿನಗರ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ವೈಯಕ್ತಿಕ ಪ್ರಶಸ್ತಿ:
ಬಾಲಕರ ವಿಭಾಗ – ಬೆಸ್ಟ್ ಫಾರ್ವರ್ಡರ್: ಇಯಾದ್ ಇಸ್ಮಾಯಿಲ್ (ಸೈಂಟ್ ಜೋಸೆಫ್), ಬೆಸ್ಟ್ ಗೋಲ್ ಕೀಪರ್: ಮಿಸ್ಬಾ (ಗ್ರೀನ್ ವ್ಯೂ), ಮ್ಯಾನ್ ಆಫ್ ದಿ ಮ್ಯಾಚ್: ಮಹಮ್ಮದ್ ಕೈಫ್ (ಗ್ರೀನ್ ವ್ಯೂ)
ಬಾಲಕಿಯರ ವಿಭಾಗ – ಬೆಸ್ಟ್ ಫಾರ್ವರ್ಡರ್: ಆಯಿಷತ್ ಜುಮೈರಾ (ಕೆಪಿಎಸ್ ಸುಳ್ಯ), ಬೆಸ್ಟ್ ಗೋಲ್ ಕೀಪರ್: ಸಾನಿಕ (ಕೆಪಿಎಸ್ ಸುಳ್ಯ), ಪ್ಲೇಯರ್ ಆಫ್ ದಿ ಮ್ಯಾಚ್: ಜನನಿ ಎಸ್.ಬಿ. (ಕೆಪಿಎಸ್ ಸುಳ್ಯ)

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಎಸ್ ಗಾಂಧಿನಗರ ಎಸ್‌ಡಿಎಂಸಿ ಉಪಾಧ್ಯಕ್ಷ ಚಿದಾನಂದ ಕಾಯರ್ತೋಡಿ ವಹಿಸಿದ್ದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಕೆ.ಎಂ. ಮುಸ್ತಫ ಬಹುಮಾನ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಎಸ್ ಸುಳ್ಯ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ, ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಪರಮೇಶ್ವರಿ, ಪ್ರೌಢಶಾಲಾ ವಿಭಾಗದ ಜ್ಯೋತಿಲಕ್ಷ್ಮಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಅಶ್ವಿನಿ, ದೈಹಿಕ ಶಿಕ್ಷಣ ಶಿಕ್ಷಕಿಯರಾದ ಪದ್ಮಿನಿ, ಕಲ್ಪಲತಾ, ಭವಾನಿ, ಗ್ರೀನ್ ವ್ಯೂ ಪ್ರೌಢಶಾಲೆಯ ಹೆಚ್‌ಎಂ ಇಲ್ಯಾಸ್ ಕಾಶಿಪಟ್ಣ, ಟೀಮ್ ರೋಜಾ ಅಧ್ಯಕ್ಷ ಅಶ್ರಫ್ ಗುರ್ಪು ಉಪಸ್ಥಿತರಿದ್ದರು.

ವಿಷ್ಣು ನಾರ್ಕೋಡ್ ಕಾರ್ಯಕ್ರಮ ನಿರೂಪಿಸಿದರು. ತಂಡದ ಕೋಚ್‌ಗಳಾಗಿ ರಿಜು ಮತ್ತು ರವೂಫ್, ತೀರ್ಪುಗಾರರಾಗಿ ಖರ್ರಾರ್, ಹೈದರ್, ಸಿಯಾ ಮತ್ತು ಶಾಝಿನ್ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here