ಪುತ್ತೂರು: ನೃತ್ಯಾಂತರಂಗ 148ನೇ ಸರಣಿಯಲ್ಲಿ ಭಾವನಾ ಶಂಕರ್ ಭರತನಾಟ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ನೃತ್ಯಾಂತರಂಗದ 148ನೇ ಸರಣಿ ಸೆ.6ರ ಭಾನುವಾರ ಸಂಜೆ 5.30ಕ್ಕೆ ಪುತ್ತೂರಿನ ಶಶಿ-ಶಂಕರ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ಭಾವನಾ ಶಂಕರ್ ಅವರ ಭರತನಾಟ್ಯ ಪ್ರದರ್ಶನ ಈ ಸರಣಿಯ ಪ್ರಮುಖ ಆಕರ್ಷಣೆಯಾಗಿತ್ತು. ಗೌರವ ಅತಿಥಿಯಾಗಿ ಎಸ್‌ಎಂವಿಐಟಿ ಉಡುಪಿಯ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಆಶ್ರಿತಾ ನವೀನ್ ಸರಳಾಯ ಉಪಸ್ಥಿತರಿದ್ದರು.

ವಿಭಾ ಶ್ರೀ ವಿ. ಗೌಡ ಕಾರ್ಯಕ್ರಮ ನಿರೂಪಿಸಿದರು. ಹಿಮನೀಶ್ ಶಂಖನಾದ, ಪ್ರೀತಿಕಲಾ ಅವರ ಓಂಕಾರದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಪ್ರದಾ ಪಂಚಾಂಗ ನೆರವೇರಿಸಿದರು, ಸನ್ನಿಧಿ ಎಸ್. ಪ್ರಾರ್ಥಿಸಿದರು. ಧೃತಿ ಅತಿಥಿ ಪರಿಚಯ ಮಾಡಿದರೆ, ವಿಷ್ಣುಪ್ರಿಯಾ ಕಲಾವಿದೆ ಭಾವನಾ ಶಂಕರ್ ಪರಿಚಯ ನೀಡಿದರು.

ವಿದ್ವಾನ್ ಬಿ. ದೀಪಕ್ ಕುಮಾರ್ ಅವರು ನೃತ್ಯಾಂತರಂಗದ ಆಶಯ ವಿವರಿಸಿ, ಶಾಸ್ತ್ರೀಯ ಕಲೆಗಳಿಗೆ ವೇದಿಕೆ ಕಲ್ಪಿಸುವುದು, ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡುವುದು ಇದರ ಉದ್ದೇಶ ಎಂದರು.

ಆಶ್ರಿತಾ ನವೀನ್ ಸರಳಾಯ ಮಾತನಾಡಿ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಜೊತೆಗಿನ ತಮ್ಮ ಸಂಬಂಧ ಸ್ಮರಿಸಿ, ಕಲೆಗಾಗಿ ದೀಪಕ್ ಕುಮಾರ್ ಕುಟುಂಬ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ನಂತರ ನಡೆದ ಭಾವನಾ ಶಂಕರ್ ಭರತನಾಟ್ಯ ಪ್ರದರ್ಶನದಲ್ಲಿ ಶಾಸ್ತ್ರೀಯ ಸೊಗಡು, ಲಯಬದ್ಧತೆ, ಅಂಗಶುದ್ಧಿ ಮತ್ತು ಭಾವಾಭಿನಯ ಪ್ರೇಕ್ಷಕರ ಮನಸೂರೆಗೊಂಡಿತು.

LEAVE A REPLY

Please enter your comment!
Please enter your name here