ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಗೆ ವಲಯ ಮಟ್ಟದ ಕಬಡ್ಡಿಯಲ್ಲಿ ಅವಳಿ ಪ್ರಶಸ್ತಿ

0

ಪುತ್ತೂರು:ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯಮಟ್ಟದ ಸೀನಿಯರ್ ವಿಭಾಗದ ಬಾಲಕರ ಕಬಡ್ಡಿಯಲ್ಲಿ ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢಶಾಲೆಯ ಕಬ್ಬಡ್ಡಿ ತಂಡ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.

ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಯೋಗಿಶ್ ಹಾಗೂ ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಕಿಶನ್ ಪಡೆದಿರುತ್ತಾನೆ.
ಕರ್ನೂರು ಪ್ರಾಥಮಿಕ ಶಾಲೆಯಲ್ಲಿ ನಡೆದ ಜ್ಯೂನಿಯರ್ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪಂಚಲಿಂಗೇಶ್ವರ ಪ್ರೌಢಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಉತ್ತಮ ರೈಡರ್ ಪ್ರಶಸ್ತಿಯನ್ನು ಭುವನ್ ಪಡೆದಿರುತ್ತಾನೆ. ತಂಡಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಮುರಳಿ ಮೋಹನ ಶೆಟ್ಟಿ ಹಾಗೂ ಹಿರಿಯ ವಿದ್ಯಾರ್ಥಿ ಯಶವಂತ್ ಕೆ ಸಿ ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here