







ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಸೂತ್ರಬೆಟ್ಟು ಎಂಬಲ್ಲಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಸ್ಕೂಟರ್ ಹಾಡಹಗಲೇ ನಾಪತ್ತೆಯಾದ ಘಟನೆ ಸೆ.9ರಂದು ನಡೆದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.


ಸೂತ್ರಬೆಟ್ಟು ನಿವಾಸಿ ಸಂಗೀತಾ ಎಂಬವರು ಆಕ್ಟೀವಾ ಹೋಂಡಾ ಸ್ಕೂಟರ್‌ನಲ್ಲಿ ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟು ವಾಹನವನ್ನು ಮನೆಯ ಪಕ್ಕ ರಸ್ತೆ ಬದಿ ಪಾರ್ಕ್ ಮಾಡಿದ್ದರು. ಮಧ್ಯಾಹ್ನ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲೆಂದು ನೋಡುವಾಗ ಸ್ಕೂಟರ್ ನಾಪತ್ತೆಯಾಗಿತ್ತು.ಈ ಕುರಿತು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.













