







ಸುಳ್ಯ:ಈ ವರ್ಷ ಸುಳ್ಯ ತಾಲೂಕಿನಿಂದ ಸುಮಾರು 40 ಕ್ಕೂ ಮಿಕ್ಕಿದ ಯಾತ್ರಿಕರು ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದು ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಿ ಫಿಟ್ ನೆಸ್ ಸರ್ಟಿಫಿಕೇಟ್ ನ್ನು ಅಪ್ ಲೋಡ್ ಮಾಡಬೇಕಾಗಿದೆ.
ಈ ಹಿಂದೆ ಯಾತ್ರಾರ್ಥಿಗಳು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಹೋಗಿ ಡಿಸ್ಟ್ರಿಕ್ ಸರ್ಜನ್ ರವರಿಂದ ಮೆಡಿಕಲ್ ಸರ್ಟಿಫಿಕೇಟ್ ಪಡಯಬೇಕಾಗಿತ್ತು.ಕಳೆದ ವರ್ಷದಿಂದ ಸರ್ಕಾರ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಿರುವುದು ಅನುಕೂಲಕರವಾಗಿದೆ ಎಂದು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.ಎಂ ಮುಸ್ತಫ ತಿಳಿಸಿದರು.
ಸುಳ್ಯ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನವೀನ್ ನೇತೃತ್ವದಲ್ಲಿ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ಹಜ್ ಸಂಯೋಜಕ ಹಸನ್ ಹಾಜಿ ಮತ್ತು ಯಾತ್ರಾರ್ಥಿ ಗಳು ಉಪಸ್ಥಿತರಿದ್ದರು.












