







ಈಶ್ವರಮಂಗಲ:ವಿದ್ಯಾ ಭಾರತಿ ವಿದ್ಯಾ ಕೇಂದ್ರ ನಾಡರ್ಗಲ್ ಹೈದರಾಬಾದ್ ಇಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಭಾರತ ಮಧ್ಯ ಕ್ಷೇತ್ರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶನ್ಮಿತಾ 3000ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದು ಮುಂದೆ ಉತ್ತರ ಪ್ರದೇಶದ ನೆಹರು ನಗರ್ ಗಾಜಿಯಾಬಾದ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.












