ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಭಾರವಿ.ಕೆ. ಭಟ್ ವಿದ್ಯಾಭಾರತಿ ಗಣಿತ ಪ್ರಯೋಗದ ಸ್ಪರ್ಧೆಯಲ್ಲಿ ದಕ್ಷಿಣಾ ವಲಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಬಳ್ಳಾರಿಯ ಬಾಲಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಗಣಿತ -ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 10ನೇ ತರಗತಿಯ ವಿದ್ಯಾರ್ಥಿ ಭಾರವಿ ಕೆ.ಭಟ್ ಕಿಶೋರ ವರ್ಗ ವಿಭಾಗದ ಗಣಿತ ಪ್ರಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ ತಿಂಗಳು ಹೈದರಾಬಾದ್ ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿರುವ ಇವರು ಡಾll ರವಿಪ್ರಕಾಶ್.ಕೆ ಮತ್ತು ಡಾllವಿಜಯ ಸರಸ್ವತಿ. ಬಿ ದಂಪತಿ ಪುತ್ರ. ಇವರಿಗೆ ಹಾಗೂ ಸ್ಪರ್ಧೆಯ ತಯಾರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ವರ್ಗದವರಿಗೆ ಅಭಿನಂದನೆ ಸಲ್ಲಿಸಿದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಇವರ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

ಇದೇ ಸಂಸ್ಥೆಯಲ್ಲಿ ನಡೆದ ಕಿಶೋರ ವರ್ಗದ ವೇದಗಣಿತ ರಸಪ್ರಶ್ನೆ ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಥಮ್ ಟಿ. ರಾವ್, ಮನ್ವಿತ್ ಶಂಕರ್ ಮತ್ತು ಚಿಂತನ್ ಹರೀಶ್ ಶೆಟ್ಟಿ ಇವರ ತಂಡವು ಉತ್ತಮ ಪೈಪೋಟಿ ನೀಡಿ ತೃತೀಯ ಸ್ಥಾನ ಗಳಿಸಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here