







ಪುತ್ತೂರು:ನರಿಮೊಗರು ಸೇರಾಜೆ ಶ್ರೀಶಾರದಾಂಬ ಸೇವಾ ಟ್ರಸ್ಟ್ ಮತ್ತು ಸೇರಾಜೆ ಶ್ರೀ ಶಾರದಾಂಬ ಭಜನಾ ಮಂಡಳಿಯವರಿಂದ ನಡೆಯುವ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.15ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸೇರಾಜೆ ಶ್ರೀ ಶಾರದಾಂಬ ಭಜನಾ ಮಂದಿರಲ್ಲಿ ನಡೆಯಲಿದೆ.
ನಾರಾಯಣ ಐತಾಳರವರ ಪೌರೋಹಿತ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣೇಶನ ವಿಗ್ರಹ ಆಗಮನದ ಬಳಿಕ ವಿಗ್ರಹ ಪ್ರತಿಷ್ಠೆ, ಗಣಹೋಮ ನಡೆಯಲಿದೆ. ನಂತರ ನಡೆಯುವ ಆಟೋಟ ಸ್ಪರ್ಧೆಗಳಲ್ಲಿ ಮಹಿಳೆಯರು, ಪುರುಷರು, ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಪುರುಷರ 60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆಯ ಬಳಿಕ ಗಣೇಶನ ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ಶ್ರೀಶಾರದಾಂಬ ಸೇವಾ ಟ್ರಸ್ಟ್ ಮತ್ತು ಸೇರಾಜೆ ಶ್ರೀ ಶಾರದಾಂಬ ಭಜನಾ ಮಂಡಳಿಯ ಪ್ರಕಟಣೆ ತಿಳಿಸಿದೆ.












