ಈಶ್ವರಮಂಗಲ: ಗ್ರಾಮಾಂತರ ವಲಯ ಕಬಡ್ಡಿಯಲ್ಲಿ ಗಜಾನನ ಶಾಲೆಯ ಬಾಲಕಿಯರ ತಂಡ ಪ್ರಥಮ- ಬಾಲಕರ ತಂಡ ದ್ವಿತೀಯ

0

ಈಶ್ವರಮಂಗಲ: ಪುತ್ತೂರು ಗ್ರಾಮಾಂತರ ವಲಯ ಮಟ್ಟದ 17ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ ಈಶ್ವರಮಂಗಲದಲ್ಲಿ ನಡೆಯಿತು.

ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಭವಿಷ್ ಕೆ.ಜಿ. ಬೆಸ್ಟ್ ರೈಡರ್ ಪ್ರಶಸ್ತಿ ಪಡೆದರೆ, ಬಾಲಕಿಯರ ವಿಭಾಗದಲ್ಲಿ 9ನೇ ತರಗತಿಯ ಸಾತ್ವಿ ಜಿ. ರೈ ಬೆಸ್ಟ್ ರೈಡರ್ ಹಾಗೂ 9ನೇ ತರಗತಿಯ ಸಾನ್ವಿ ಆರ್. ರೈ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here