






ಕಾಣಿಯೂರು: ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳಂದೂರು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಬೆಳಂದೂರಿನ ರಾಜೀವ್ ಗಾಂಧಿ ಸಭಾಭವನದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಕಮಲ ಪುರಂದರರವರು ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ವಲಯ ಮೇಲ್ವಿಚಾರಕಿ ನಳಿನಾಕ್ಷಿ, ಬೆಳಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಶೆಟ್ಟಿ ದೀಪ ಬೆಳಗಿಸಿ ಶುಭಹಾರೈಸಿದರು.



ಒಕ್ಕೂಟದ ಪದಾಧಿಕಾರಿಗಳು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಒಕ್ಕೂಟದ ಕಾರ್ಯದರ್ಶಿ ವಿನಿತ ಅವರು ವಾರ್ಷಿಕ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಕೇಶವತಿಯವರು ಲೆಕ್ಕಪತ್ರ ಮಂಡಿಸಿದರು. ತಾಲೂಕು ಅಭಿಯಾನ ನಿರ್ವಹಣಾ ಘಟಕದ ವಣೆಯ ಮೇಲ್ವಿಚಾರಕಿ ನಳಿನಾಕ್ಷಿ ಅವರು ಎನ್ ಆರ್ ಎಲ್ ಎಂ ಯೋಜನೆ ಬಗ್ಗೆ ಒಕ್ಕೂಟದ ಅನುದಾನಗಳ ಬಗ್ಗೆ, ಸ್ವಸಹಾಯ ಸಂಘದ ಮಹಿಳೆಯರ ಉದ್ಯೋಗದ ಬಗ್ಗೆ, ಘನ ತ್ಯಾಜ್ಯ ಘಟಕ ಕಸ ವಿಲೇವಾರಿಯ ಬಗ್ಗೆ, ಮನೆ ಮನೆ ಕಸ ಸಂಗ್ರಹದ ಬಗ್ಗೆ, ಗ್ರಾಮ ಪಂಚಾಯಿತಿ ಮತ್ತು ಒಕ್ಕೂಟದ ಕರಾರು ಒಪ್ಪಂದಗಳ ಬಗ್ಗೆ, ಕೌಶಲ್ಯ ಅಭಿವೃದ್ಧಿ ಯೋಜನೆ ಮತ್ತು ಸಮಗ್ರ ಕೃಷಿ ಯೋಜನೆ ಮತ್ತು ಒಕ್ಕೂಟದ ಕಾನೂನಾತ್ಮಕ ನಿಯಮಗಳನ್ನು ತಿಳಿಸಿದರು.



ತಾಲೂಕು ಸಂಪನ್ಮೂಲ ವ್ಯಕ್ತಿ ರಮ್ಯಾ , ಪಂಚಾಯತ್ ಕಾರ್ಯದರ್ಶಿ ನಾರಾಯಣ್ , ಒಕ್ಕೂಟದ ಸಿಬ್ಬಂದಿಗಳು ಮುಖ್ಯ ಪುಸ್ತಕ ಬರಹಗಾರರಾದ ಗೌರಿ, ಸಮುದಾಯ ಸಂಪನ್ಮೂಲ ವ್ಯಕ್ತಿ ಸವಿತಾ ಮತ್ತು ಪಾರ್ವತಿ, ಪಶುಸಕಿ ಸುಧಾ, ಕೃಷಿ ಸಖಿ ಶೋಭಲತಾ, ಅಂಗನವಾಡಿ ಕಾರ್ಯಕರ್ತೆಯವರು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು. ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎರಡು ವರ್ಷಗಳ ವರೆಗೆ ಸೇವೆ ಸಲ್ಲಿಸಿದ ಒಕ್ಕೂಟದ ಪದಾಧಿಕಾರಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಅಲ್ಲದೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸಿಬ್ಬಂದಿಗಳು ಸಂಜೀವಿನಿ ಗೀತೆ ಹಾಡಿದರು. ಒಕ್ಕೂಟದ ಅಧ್ಯಕ್ಷೆ ಕಮಲ ಪುರಂದರ ಸ್ವಾಗತಿಸಿದರು. ಮುಖ್ಯ ಪುಸ್ತಕ ಬರಹಗಾರರು ಗೌರಿ ವಂದಿಸಿದರು. ಸಮುದಾಯ ಸಂಪನ್ಮೂಲ ವ್ಯಕ್ತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.










