ನಾಳೆ ಬಲ್ಯ ಶ್ರೀ ಉಮಾಮಹೇಶ್ವರೀ ಆವರಣದಲ್ಲಿ 2ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ

0

ಕಡಬ: ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಆವರಣದಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯು ಸೆ.14ರಂದು ನಡೆಯಲಿದೆ.


ಬೆಳಿಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಮತ್ತು ಗಣಪತಿ ಹೋಮ, ಬಳಿಕ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ದೇವರಿಗೆ ವಿಶೇಷ ಮಹಾಪೂಜೆ, ಬಳಿಕ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಓಕುಳಿ ಏಲಂ ನಡೆಯಲಿದೆ. ಸಂಜೆ ಶೋಭಾಯಾತ್ರೆಯೊಂದಿಗೆ ಹೊಸ್ಮಠ ಗುಂಡ್ಯ ಹೊಳೆಯಲ್ಲಿ ವಿಗ್ರಹ ಜಲಸ್ಥಂಭನ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿ ಹಾಗೂ ದೇವಳದ ವಿವಿಧ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here