ಕೆಮ್ಮಾಯಿಯಲ್ಲಿ `ಹರಿವಂಶ ಪುರಾಣ ಪ್ರವಚನ’ ಸಪ್ತಾಹ ಉದ್ಘಾಟನೆ

0

ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ವಲಯದ ಆಶ್ರಯದಲ್ಲಿ ಕೆಮ್ಮಾಯಿಯ ಶ್ರೀ ವಿಷ್ಣು ಮಂಟಪದಲ್ಲಿ ಆಯೋಜಿಸಲಾದ ಏಳು ದಿನಗಳ `ಹರಿವಂಶ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಸೆ.15ರಂದು ಸಂಜೆ ಚಾಲನೆ ದೊರೆಯಿತು.


ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಆಶಿತ್ ಕೃಷ್ಣ ರಾವ್ ನೆರವೇರಿಸಿದರು. ಹರಿಪ್ರಸಾದ್ ದಾಳಿಂಬ ಸ್ವಾಗತಿಸಿದರು. ಮೈಸೂರಿನ ಪ್ರಖ್ಯಾತ ಪ್ರವಚನಕಾರರಾದ ಡಾ. ಭ.ನಾ. ವಿಜಯೇಂದ್ರ ಆಚಾರ್ಯ ಅವರು ‘ಹರಿವಂಶ ಪುರಾಣ’ ಕುರಿತು ಮುಖ್ಯ ಪ್ರವಚನ ನೀಡಿದರು. ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ನೆರವೇರಿಸಿದ ಜಿ.ಎಲ್. ಸಮೂಹ ಸಂಸ್ಥೆಗಳ ಮಾಲಕ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿದ ಪುತ್ತೂರಿನಲ್ಲಿ ಒಂದು ಉತ್ತಮ ಸಂಘದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ ಇದು ಅತ್ಯಂತ ಯಶಸ್ವಿಯಾಗಿ ಮೂಡಿ ಬರಲಿ ಹರಿವಂಶ ಪುರಾಣ ನಮಗೆಲ್ಲರಿಗೂ ತಿಳಿಯಲಿ ಎಂದು ಶುಭ ಹಾರೈಸಿದರು.


ಮಂಗಳೂರಿನ ಶಾರದಾ ಮಹಾವಿದ್ಯಾಲಯದ ಸಂಸ್ಥಾಪಕ ಎಂ. ಬಿ. ಪುರಾಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಕ್ಕಳು ಧಾರ್ಮಿಕ ಸಾಂಸ್ಕೃತಿಕ ಸಂಸ್ಕೃತಿಗಳು ಮನೆಯಿಂದಲೇ ಕಲಿಯುವಂತಾಗಬೇಕು ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು ಇಂತಹ ಕಾರ್ಯಕ್ರಮ ಇನ್ನಷ್ಟು ಮೂಡಿ ಬರಲಿ ಎಂದು ಶುಭ ಹಾರೈಸಿದರು. ಡಾ| ಮಾಧವ ಭಟ್ ಇವರು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಅನಂತಕೃಷ್ಣ ಪಡ್ಡಿಲ್ಲಾಯ ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕೆ.ಎಸ್.ಅವರು ಮಾತನಾಡಿ ಯುವ ಜನರು ಇಂತಹ ಪ್ರವಚನದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು.


ತಾಲೂಕು ಮಹಿಳಾ ಸಂಪದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ ಹಾಗೂ ವಲಯ ಮಹಿಳಾ ಸಂಪದ ಅಧ್ಯಕ್ಷೆ ಅನ್ನಪೂರ್ಣ ಶೇವಿರೆ ಉಪಸ್ಥಿತರಿದ್ದರು. ರಾಮಕುಂಜ ಶಾಲೆಯನ್ನು ರಾಷ್ಟ್ರಮಟ್ಟಕ್ಕೆ, ಕೊಂಡು ಹೋದಂತಹ ಡಾ| ನಾರಾಯಣ ಭಟ್ ರಾಮಕುಂಜ ಇವರನ್ನು ಹಾಗೂ ಯಶಸ್ವಿ ಉದ್ಯಮಿ ಹಾಗೂ ಬ್ರಾಹ್ಮಣ ಸಂಘ ಕಟ್ಟಿದಂತಹ ಗಣೇಶ ಹೆಬ್ಬಾರ್ ಇವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೊಳುವಾರು ವಲಯದ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ, ಕೋಶಾಧಿಕಾರಿ ಅನಂತ ಪದ್ಮನಾಭ ಕದಂಬಳಿತ್ತಾಯ ಸೇರಿದಂತೆ ಶಿವಳ್ಳಿ ಸಂಪದದ ಸರ್ವ ಸದಸ್ಯರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು. ಹರಿವಂಶ ಪುರಾಣ ಪ್ರವಚನವು ಸೆ.21ರವರೆಗೆ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here