







ಧಾರ್ಮಿಕ ಸಭೆ ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ,ಸಾಧಕರಿಗೆ ಸನ್ಮಾನ


ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ವತಿಯಿಂದ ನಡೆದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಿದ್ದಿವಿನಾಯಕ ಸಭಾಭವನದಲ್ಲಿ ನಡೆಯಿತು.ಅರ್ಚಕರಾದ ಕೇಶವ ಕಲ್ಲೂರಾಯ ಬಂಬಿಲ, ಸುರೇಶ್ ಉಡುಪ ಹಾಗೂ ನಾರಾಯಣ ಕೋರ್ನಾಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.



ಸಾಮಾಜಿಕ ಕಾರ್ಯಕರ್ತ ರಜನೀಶ್ ಪಿ. ಅವರು ಮಾತನಾಡಿ ಮಕ್ಕಳಿಗೆ ಎಳವೆಯಲ್ಲೇ ಧಾರ್ಮಿಕ ಶ್ರದ್ಧೆ ತಿಳಿಸಬೇಕು.ಮಕ್ಕಳಿಗೆ ಮೊಬೈಲ್ ಬಳಕೆ ಎಳವೆಯಲ್ಲೇ ಕಲಿಸಿದಂತೆ ಧಾರ್ಮಿಕ ಸಂಸ್ಕಾರವನ್ನೂ ಕಲಿಸಬೇಕು. ಮರವನ್ನು ಸಸಿಯಾಗಿದ್ದಾಗಲೇ ಬಗ್ಗಿಸಬೇಕು. ಕೈ ಮುಗಿಯುವುದು, ದೇವರ ಕಥೆಗಳನ್ನು ಹೇಳುವುದು, ಹಬ್ಬಗಳನ್ನು ಅನುಭವಿಸುವಂತೆ ಮಾಡುವುದು ಇವುಗಳಿಂದ ಮಕ್ಕಳಲ್ಲಿ ನೈತಿಕತೆ ಮತ್ತು ಬೇರು ಗಟ್ಟಿಯಾಗುತ್ತದೆ. ಎಳವೆಯಲ್ಲಿ ಕಲಿತ ಸಂಸ್ಕಾರ ಜೀವನಪೂರ್ತಿ ಉಳಿಯುತ್ತದೆ. ಪೋಷಕರು ಮಕ್ಕಳಿಗೆ ಆಸ್ತಿಗಿಂತ ಮೊದಲು ಸಂಸ್ಕಾರವನ್ನು ನೀಡಬೇಕು ಎಂದರು.ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ವತಿಯಿಂದ ಪಾಲ್ತಾಡಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತ್ರಿಶಾ ರೈ ನೆಲ್ಯಾಜೆ, ಚೈತನ್ಯ ಪಿ.ಜೆ.ಪಾಲ್ತಾಡಿ ದೊಡ್ಡಮನೆ,ವಿಘ್ನೇಶ್ ಶೆಟ್ಟಿ ಬಂಬಿಲ,ಅಶ್ವಿಕಾ ಬಿ. ಬಂಬಿಲ ಬೈಲಾಡಿ,ತನುಷ್ ಎ.ಬಿ. ಬಂಬಿಲ, ಬಿ.ಎಲ್.ರೇಶ್ಮಾ,ಅನುಶ್ರೀ ಬಿ.,ಪ್ರೀತಿಕಾ ಬಂಬಿಲ, ಶ್ರದ್ಧಾ ಬಂಬಿಲ, ಪ್ರಿಯಾಂಕ ಬಂಬಿಲ, ದೀಕ್ಷಾ ಅಂಗಡಿಮೂಲೆ,ವೀಕ್ಷಾ ಅಂಗಡಿಮೂಲೆ
ಅವರನ್ನು ಅಭಿನಂದಿಸಲಾಯಿತು.


ಸಾಧಕರಿಗೆ ಸನ್ಮಾನ ಈ ಸಂದರ್ಭದಲ್ಲಿ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ. ಹಾಗೂ ಪ್ರಶಸ್ತಿ ಪುರಸ್ಕೃತ ಕೃಷಿ ಸಖಿ ಜಯಂತಿ ಅಮೈ ಪಾಲ್ತಾಡಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಬೆಳಿಗ್ಗೆ 8 ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಟೆ, ಗಣಹೋಮ ,10ರಿಂದ ಭಜನಾ ಕಾರ್ಯಕ್ರಮ,ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಅಪರಾಹ್ನ ಅಂಗನವಾಡಿ ಮಕ್ಕಳಿಗೆ ರಾಧೆ-ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಮಂಜುನಾಥನಗರ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,ಸಿದ್ದಿವಿನಾಯಕ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
ಸಂಜೆ 4ಕ್ಕೆ ಮಹಾಪೂಜೆ ,ಪ್ರಸಾದ ವಿತರಣೆ,ಉಪಾಹಾರ ಬಳಿಕ ವಿಸರ್ಜನಾ ಮೆರವಣಿಗೆ ನಡೆದು ಬಂಬಿಲ ಗೌರಿಹೊಳೆಯಲ್ಲಿ ವಿಗ್ರಹದ ಜಲಸ್ತಂಭನ ನಡೆಯಿತು.
ಈ ಸಂದರ್ಭದಲ್ಲಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ,ಕಡಬ ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಬಾಳಪ್ಪ ಪೂಜಾರಿ ಬಂಬಿಲದೋಳ, ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಹರೀಶ್ ರೈ ಮಂಜುನಾಥನಗರ, ಸಿದ್ದಿವಿನಾಯಕ ಸೇವಾ ಸಂಘದ ಪೂರ್ವಾಧ್ಯಕ್ಷ ಈಶ್ವರ ಕೆ.ಎಸ್.,ರಕ್ಷಿತ್,ನಿತ್ಯಪ್ರಸಾದ್ ಶೆಟ್ಟಿ, ದೀಕ್ಷಿತ್ ,ಕೆ.ಪಿ.ಎಸ್.ಕೆಯ್ಯೂರು ಇದರ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್., ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ., ಜತನ್ ಬಂಬಿಲ,ಆಶೀತ್ ರೈ ಕುಂಜಾಡಿ, ಬಂಬಿಲ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸುರೇಶ್ ಬಂಬಿಲದೋಳ,ಸವಣೂರು ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಅಂಗಡಿಮೂಲೆ ಮೊದಲಾದವರಿದ್ದರು.
ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ ಸ್ವಾಗತಿಸಿದರು. ಸಂದೀಪ್ ರೈ ,ವಿಶ್ವಜಿತ್ ಶೆಟ್ಟಿ ,ಪ್ರಜ್ವಲ್ ಸಾಧಕರ ಪಟ್ಟಿ ವಾಚಿಸಿದರು. ವಿವೇಕಾನಂದ ಯುವಕ ಮಂಡಲದ ಕಾರ್ಯದರ್ಶಿ ಸತ್ಯಪ್ರಕಾಶ್ ಶೆಟ್ಟಿ ಬಹುಮಾನಿತರ ಪಟ್ಟಿ ವಾಚಿಸಿದರು.ವಿವೇಕಾನಂದ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ ವಂದಿಸಿದರು.ಪ್ರಶಾಂತ್ ಬಂಬಿಲದೋಳ ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಸಂಸದ ನಳಿನ್ ಕುಮಾರ್, ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿದರು.

ಗ್ರಾಮಾಭಿವೃದ್ದಿ ಚಿಂತನೆಯ ಗಣೇಶೋತ್ಸವ ಹಿರಿಯರು ಗ್ರಾಮಾಭಿವೃದ್ದಿ ಚಿಂತನೆಯಿಂದ ಸಿದ್ದಿವಿನಾಯಕ ಸೇವಾ ಸಂಘ ಸ್ಥಾಪಿಸಿ ಗಣೇಶೋತ್ಸವ ಆಚರಿಸಲು ಆರಂಭಿಸಿ 43ನೇ ವರ್ಷದ ಸಂಭ್ರಮದ ಆಚರಣೆ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. -ಪ್ರವೀಣ್ ಬಂಬಿಲದೋಳ ಅಧ್ಯಕ್ಷರು ಶ್ರೀ ಸಿದ್ದಿವಿನಾಯಕ ಸೇವಾ ಸಂಘ ಮಂಜುನಾಥನಗರ










