







ಪುತ್ತೂರು: ಪುಣೆಯ ಪ್ರತಿಷ್ಠಿತ ಬಂಟ್ಸ್ ಅಸೋಸಿಯೇಷನ್ ನ ಯುವ ವಿಭಾಗದ ಅಧ್ಯಕ್ಷರಾಗಿ (Youth Wing President) ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ನಿವಾಸಿ ಪ್ರಮೋದ್ ರೈ ಆಯ್ಕೆಯಾಗಿದ್ದಾರೆ.


‘ಸಂಸ್ಕೃತಿ, ಸದ್ಭಾವನಾ, ಸಮಾನತೆ’ ಎಂಬ ಧ್ಯೇಯವಾಕ್ಯದೊಂದಿಗೆ ‘ಏಕತೆ, ಪರಂಪರೆ, ಪ್ರಗತಿ’ ಗುರಿಯನ್ನು ಹೊಂದಿರುವ ಪುಣೆ ಬಂಟ್ಸ್ ಸಂಘವು ಯುವ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ‘Stronger Youth, Brighter Tomorrow’ ಎಂಬ ಪರಿಕಲ್ಪನೆಯೊಂದಿಗೆ ಪ್ರಮೋದ್ ರೈ ಅವರನ್ನು ಈ ಮಹತ್ವದ ಜವಾಬ್ದಾರಿಗೆ ನೇಮಕ ಮಾಡಲಾಗಿದೆ.



ನೂತನ ಅಧ್ಯಕ್ಷರಾಗಿ ಪ್ರಮೋದ್ ರೈ ಅವರು ಯುವಕರಲ್ಲಿ ತೊಡಗಿಸಿಕೊಳ್ಳುವಿಕೆ, ಸಶಕ್ತೀಕರಣ, ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಕ್ರಿಯಾಶೀಲ ನಾಯಕತ್ವ ಸಮುದಾಯದ ಏಕತೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಸಂಘದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.
ಪುಣೆಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರಮೋದ್ ರೈ ಅವರು ಚೆನ್ನಾವರ ಪಟ್ಟೆ ವಿಶ್ವನಾಥ ರೈ ಹಾಗೂ ಸುಶೀಲಾ ವಿ ರೈ ಅವರ ಪುತ್ರ.








