ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಪಾಣಾಜೆ ಎಂಡೋ ಪಾಲನಾ ಕೇಂದ್ರಕ್ಕೆ ಬಿ.ಜೆ.ಪಿ ವತಿಯಿಂದ ಹಣ್ಣು ಹಂಪಲು ಸಿಹಿತಿಂಡಿ ವಿತರಣೆ

0

ಪಾಣಾಜೆ: ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನದ ಪ್ರಯುಕ್ತ ಸೇವಾ ಸಂಕಲ್ಪ ಯೋಜನೆ ಕಾರ್ಯಕ್ರಮ ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ  ಆರ್ಲಪದವಿನ ಎಂಡೋ ಪಾಲನಾ ಕೇಂದ್ರದಲ್ಲಿ ಸೆ.17 ರಂದು ನಡೆಯಿತು.

ಮೋದಿಜಿಯವರಿಗೆ ಇನ್ನು ಮುಂದೆಯೂ ಉತ್ತಮ ಆರೋಗ್ಯ ಪ್ರಾಪ್ತಿಯಾಗಲು ಮತ್ತು ಪಾಲನಾ ಕೇಂದ್ರದ ಸಂತ್ರಸ್ತರಿಗೂ ಆರೋಗ್ಯ ಪ್ರಾಪ್ತಿಗೆ ಪ್ರಾರ್ಥಿಸಿ  ಶುಭ ಹಾರೈಸಲಾಯಿತು. ಪಾಲನಾ ಕೇಂದ್ರದ ಸಂತ್ರಸ್ತರಿಗೆ  ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.

ಬಿ.ಜೆ.ಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಗಣಪತಿ ಬಲ್ಯಾಯ, ಪ್ರಮುಖರಾದ ರವೀಂದ್ರ ಭಂಡಾರಿ ಬೈಂಕ್ರೋಡು, ಬಾಲಕೃಷ್ಣ ರೈ ಸೂರಂಬೈಲು, ಸುಭಾಸ್ ರೈ ಚಂಬರಕಟ್ಟ, ರವಿಶಂಕರ ಶರ್ಮ ಬೊಳ್ಳುಕಲ್ಲು,  ಗೋಪಾಲ ಮಣಿಯಾಣಿ ದೇವಸ್ಯ, ಚಂದ್ರಶೇಖರ ಎಂ.ಜಿ,  ಉಮೇಶ್ ಬಲ್ಯಾಯ, ಪ್ರಶಾಂತ ನೀರಮೂಲೆ, ನಾರಾಯಣ ಪೂಜಾರಿ ತೂಂಬಡ್ಕ, ನಾರಾಯಣ ಬಿ.ಕೆ ಹಾಗೂ ಜಿ. ಎಸ್. ಹರೀಶ್ ಆರ್ಲಪದವು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here