ಪೆರ್ಲಂಪಾಡಿ : ಷಣ್ಮುಖದೇವ ಪ್ರೌಢಶಾಲೆಯ ರಸ್ತೆ, ನವೀಕೃತ ತರಗತಿ ಕೊಠಡಿಗಳ ಉದ್ಘಾಟನೆ

0

ಪುತ್ತೂರು : ಕೊಳ್ತಿಗೆ ಗ್ರಾಮದ  ಷಣ್ಮುಖದೇವ ಪ್ರೌಢಶಾಲೆಯ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಅನುದಾನದಲ್ಲಿ  ನಡೆದಿದ್ದು,ಅದರ ಉದ್ಘಾಟನೆ ಸೆ.17ರಂದು ನಡೆಯಿತು.

ಕಾಂಕ್ರೀಟ್ ರಸ್ತೆಯನ್ನು  ಉದ್ಘಾಟಿಸಿದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕರೂ,ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ|ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ,ಹೆಣ್ಣಿಗೆ ಅಪಾರವಾದ ಗೌರವ ವಿರುವ ಸಂಸ್ಕೃತಿ ನಮ್ಮದು ಎನ್ನುತ್ತಾ ಸಾಧುಸಂತರ ಸಾರ್ಥಕ ಬದುಕನ್ನು ಉಲ್ಲೇಖಿಸುತ್ತಾ ಹಿರಿಯರನ್ನು ಗೌರವಿಸಿ, ರಕ್ಷಿಸುವ ಜವಾಬ್ದಾರಿ ನಿಮ್ಮದು, ವಿಶ್ವಾಸ ನಂಬಿಕೆ ಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳಿ” ಎಂದು ಶುಭ ಹಾರೈಸಿದರು.

ದಾನಿಗಳ ಸಹಕಾರದಿಂದ ನವೀಕೃತಗೊಂಡ ತರಗತಿ ಕೋಣೆಗಳನ್ನು ಉದ್ಯಮಿ ಸಹಜ್ ರೈ ಬಳಜ್ಜ ಉದ್ಘಾಟಿಸಿ ಮಾತನಾಡಿ,ನ ಗ್ರಾಮೀಣ ಭಾಗದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ  ಷಣ್ಮುಖದೇವ ಪ್ರೌಢಶಾಲೆಯಲ್ಲಿ ಕಲಿಯುವುದೊಂದು ನಿಮ್ಮ ಸೌಭಾಗ್ಯ  ಮಕ್ಕಳೇ, ಚೆನ್ನಾಗಿ ಕಲಿತು ಸದ್ಗುಣ ಸಂಪನ್ನರಾಗಿ ಎಂದರು. 

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿ ವಿಜಯ ನಾರಾಯಣ ಮಾತನಾಡಿ,”ಸಂಸ್ಕಾರ ಯುತ ಶಿಕ್ಷಣವು  ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂಬ ಧ್ಯೇಯ ದೊಂದಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿ ಸ್ಥಾಪನೆಯಾದ ಈ ಷಣ್ಮುಖದೇವ ಪ್ರೌಢಶಾಲೆಯ ಪ್ರಗತಿಗೆ ಊರವರೂ ಕೈಜೋಡಿಸಿಕೊಳ್ಳಿ,ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವ ಕಾರ್ಯವನ್ನು ನಾವು ಜೊತೆಗೆ ನಿರ್ವಹಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರೂ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಮಾತನಾಡಿ,ಅಭಿವೃದ್ದಿ ಕಾಮಗಾರಿಗಳಿಗೆ ಕೊಡುಗೆ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಶಾಲೆಯು ಸೌಕರ್ಯಗಳನ್ನು ಪಡೆಯುತ್ತಾ ಬೆಳೆದಂತೇ ಇಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು.ಅದಕ್ಕಾಗಿ ಸಮಾಜ  ಮುಂದೆ ಬರಬೇಕು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆಕಾರ್ಯದರ್ಶಿ ಭರತ್ ಪೈ ಶುಭ ಹಾರೈಸಿದರು.ಷಣ್ಮುಖದೇವ ಪ್ರೌಢಶಾಲಾ ಆಡಳಿತ ಸಮಿತಿಯ  ಖಜಾಂಚಿ  ದಿವಾಕರ ರೈ ಕೆರೆಮೂಲೆ,ಆಡಳಿತ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರುಗಳು ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ ದರ್ಕಾಸು, ಪದಾಧಿಕಾರಿಗಳು ಪೋಷಕರು, ಶಾಲೆಯ ಅಭಿಮಾನಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಶಾಲಾ ಸಂಚಾಲಕರಾದ  ಶಿವರಾಮ ಭಟ್ ಬೀರ್ಣಕಜೆ ಸ್ವಾಗತಿಸಿದರು.ಮುಖ್ಯ ಗುರುಗಳಾದ ಕೃಷ್ಣವೇಣಿ ಅವರು ವಂದಿಸಿದರು ಸಹ ಶಿಕ್ಷಕಿ  ಭವ್ಯ ಕಾರ್ಯಕ್ರಮ ನಿರೂಪಿಸಿದರು.

ಸರ್ವರಿಗೂ ಕೃತಜ್ಞತೆ
ಗ್ರಾಮೀಣ ಭಾಗದಲ್ಲೂ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಶಾಲೆಗೆ ಆರ್ಥಿಕ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳು. ಶಾಲೆಯ ಎಸೆಸ್ಸೆಲ್ಸಿ  ಫಲಿತಾಂಶವು  ನಿರಂತರವಾಗಿ ಶೇ ನೂರು ದಾಖಲಾಗುತ್ತಿದೆ.ಊರಿನ ಶಾಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು.
– ಶಿವರಾಮ ಭಟ್ ಬೀರ್ಣಕಜೆ ,ಸಂಚಾಲಕರು ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ

LEAVE A REPLY

Please enter your comment!
Please enter your name here