







ಪುತ್ತೂರು: ತಿಂಗಳಾಡಿ ನವೋದಯ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ತಿಂಗಳಾಡಿಯಲ್ಲಿ ಗಣೇಶ ಹಬ್ಬದ ಶೋಭಾ ಯಾತ್ರೆಗೆ ಹಣ್ಣುಹಂಪಲು, ಜ್ಯೂಸ್ ಹಾಗೂ ಐಸ್‌ಕ್ರೀಂ ವಿತರಣೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ನವೋದಯ ರಿಕ್ಷಾ ಚಾಲಕ ಮಾಲಕ ಸಂಘದಲ್ಲಿರುವ ಸರ್ವಧರ್ಮೀಯ ಚಾಲಕ-ಮಾಲಕರು ಸೇರಿಕೊಂಡು ಮಾಡಿರುವ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.















