







ಪುತ್ತೂರು: ಕಲಾಕೃತಿ ಸ್ಟುಡಿಯೋ ವತಿಯಿಂದ ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಸುದ್ದಿ ಅರಿವು ಕೇಂದ್ರದ ಸಭಾಂಗಣದಲ್ಲಿ ಸೆ.20ರಂದು ಬೆಳಿಗ್ಗೆ 9.30 ರಿಂದ 5.30ರವರೆಗೆ ಒಂದು ದಿನದ ಕ್ರಿಯೇಟಿವ್ ವರ್ಕ್ ಶಾಪ್ ನಡೆಯಲಿದೆ.
ವರ್ಕ್ ಶಾಪ್ನಲ್ಲಿ ಸೀರೆ ಕುಚ್ಚು/ಗೊಂಡೆ, ಬೇಸಿಕ್ ಹ್ಯಾಂಡ್ ಮೇಡ್ ಎಂಬ್ರಾಯಡರಿ ಹಾಗೂ ಸಿಲ್ಕ್ ಥ್ರೆಡ್ ಬ್ಯಾಂಗಲ್ಸ್ ಮತ್ತು ಇಯರ್ ರಿಂಗ್ಸ್ ಬಗ್ಗೆ ತರಬೇತಿ ನಡೆಯಲಿದೆ. ಇದಕ್ಕೆ ಬೇಕಾದ ಸೀರೆ, ಬ್ಯಾಂಗಲ್ಸ್ ತರಬೇಕು. ಎಂಬ್ರಾಯಡರಿಗೆ ಐಟಮ್ ನೀಡಲಾಗುವುದು. ಪ್ರಥಮವಾಗಿ ನೋಂದಾವಣೆ ಮಾಡಿಸಿದ 3 ಜನರಿಗೆ ವಿಶೇಷ ವಿನಾಯಿತಿ ಲಭ್ಯವಿದೆ. ನಿಮ್ಮ ಇಚ್ಛೆಗೆ ಅನುಗುಣವಾಗಿ ಈ ಮೂರರಲ್ಲಿ ಯಾವ ತರಬೇತಿಯನ್ನು ಬೇಕಿದ್ದರೂ ಕೂಡ ಪಡಕೊಳ್ಳಬಹುದಾಗಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 8549825580, 8660378359 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.












