







ರೂ.46.46ಕೋಟಿ ವ್ಯವಹಾರ, ರೂ.15.36ಲಕ್ಷ ಲಾಭ, ಶೇ.8.5 ಡಿವಿಡೆಂಡ್


ಪುತ್ತೂರು: ಬಪ್ಪಳಿಗೆ ಸೈನಿಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ.46,46,01,728.91 ವ್ಯವಹಾರ ನಡೆಸಿ ರೂ.15,36,373.77 ಲಾಭ ಗಳಿಸಿ, ಸದಸ್ಯರಿಗೆ ಶೇ.8.5 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಉಮೇಶ್ ಕೆ. ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.19ರಂದು ಸೈನಿಕ ಭವನದಲ್ಲಿ ನಡೆಯಿತು. ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷಾಂತ್ಯಕ್ಕೆ 1,156 ಸದಸ್ಯರಿಂದ ರೂ.43,64,500 ಬಂಡವಾಳ, ರೂ.4,77,65,505.60 ಠೇವಣಿಗಳನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.3,17,01,081 ಸಾಲ ವಿತರಿಸಲಾಗಿದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪನಿಬಂಧನೆಯAತೆ ವಿಂಗಡಿಸಲಾಗಿದೆ ಎಂದು ಹೇಳಿದರು.



ಎಂಟು ವರ್ಷಗಳ ಹಿಂದ ಪ್ರಾರಂಭಗೊಂಡಿರುವ ಸಹಕಾರಿ ಸಂಘವು ಹಂತ ಹಂತವಾಗಿ ಬೆಳೆಯುತ್ತಿದೆ. ಪ್ರಾರಂಭದಿAದಲೂ ಸದಸ್ಯರಿಗೆ ಡಿವಿಡೆಂಡ್ ನೀಡುತ್ತಾ ಬಂದಿದೆ. ಈ ವರ್ಷ ಶೇ.8.5 ಡಿವಿಡೆಂಡ್ ನೀಡಲಾಗುತ್ತಿದೆ. ಪಾರದರ್ಶಕ ಆಡಳಿತದಲ್ಲಿ ಸಂಘವು ಬೆಳೆಯುತ್ತಿದೆ. ಸೂಕ್ಷö್ಮವಾಗಿ ಪರಿಶೀಲಿಸಿಯೇ ಸಾಲ ವಿತರಿಸಲಾಗುತ್ತಿದ್ದು ಯಾವುದೇ ಸಾಲ ಬಾಕಿಯಿಲ್ಲ. ವ್ಯವಹಾರದ ಜೊತೆಗೆ ಸಮಾಜ ಬಾಂಧವರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಸಮಾಜ ಬಾಂಧವರೆಲ್ಲರೂ ನಮ್ಮದೇ ಸಂಘ ಎಂಬ ಭಾವನೆಯಿಂದ ಸಂಘದಲ್ಲಿಯೇ ವ್ಯವಹಾರ ನಡೆಸುವ ಮುಖಾಂತರ ಸಂಘದ ಬೆಳವಣಿಗೆಯಲ್ಲಿ ಕೈಜೋಡಿಸುವಂತೆ ಅಧ್ಯಕ್ಷ ಉಮೇಶ್ ಅವರು ವಿನಂತಿಸಿದರು.
ಗೌರವಾರ್ಪಣೆ:
ಕ್ಷಾತ್ರೀಯ ಸಮಾಜ ಸೇವಾ ಸಂಘದ ಆಧ್ಯಕ್ಷ ಅರುಣ್ ಕುಮಾರ್, ಸಂಘದ ಚಿನ್ನಾಭರಣ ಮೌಲ್ಯ ಮಾಪಕರಾದ ಜಗದೀಶ್ ಆಚಾರ್ಯ, ದಿನೇಶ್ ಆಚಾರ್ಯ, ಪಿಗ್ಮಿ ಸಂಗ್ರಾಹಕರಾದ ಅನಂತಕೃಷ್ಣ ರಾವ್ ಕೆ.ಎಸ್., ಗಗನ್ ಕುಮಾರ್, ಸೂರಜ್ನಂದಾರವರನ್ನು ಸಭೆಯಲ್ಲಿ ಗೌರವಿಸಲಾಯಿತು.
ನಿರ್ದೇಶಕರಾದ ಸುಬ್ರಹ್ಮಣ್ಯ ಕೆಮ್ಮಿಂಜೆ, ಅರುಣ್ ಕುಮಾರ್ ಕೆ., ನವೀನ್ಚಂದ್ರ, ಮಾಧವ ಎ., ವಾಣಿಸುರೇಶ್ ಕುಮಾರ್ ಹಾಗೂ ವಿದ್ಯಾಲಕ್ಷ್ಮೀ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಸ್ವಾಗತಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಶ್ವರಿ ವರದಿ ಹಾಗೂ ಆಯವ್ಯಯ ಮಂಡಿಸಿದರು. ನಿರ್ದೇಶಕ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಬ್ಬಂದಿ ಸುಮಂತ್ ರೈ ಮಹಾಸಭೆಯ ನೊಟೀಸ್ ಓದಿದರು. ಆಶಿತಾ ಎನ್., ಸಹಕರಿಸಿದರು.










