







ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತೋಡಿಗೆ ಬಿದ್ದು ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಸೆ.19ರಂದು 34 ನೆಕ್ಕಿಲಾಡಿಯ ಆನೆಮಜಲಿನಲ್ಲಿ ನಡೆದಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.



ಬೋಳಂತೂರು ನಿವಾಸಿಗಳಾದ ಮುಹಮ್ಮದ್ (70) ಹಾಗೂ ಖತೀಜಾ (17) ಗಂಭೀರವಾಗಿ ಗಾಯಗೊಂಡವರಾಗಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಮರಿಯಮ್ಮ, ಅಬ್ದುಲ್ ಅಸಾಫ್, ಹಫೀಝಾ ಎಂಬವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಳಂತೂರಿನಿಂದ ಉಪ್ಪಿನಂಗಡಿಯ ಸಂಬಂಧಿಕರ ಮನೆಗೆ ಬರುತ್ತಿದ್ದ ಇವರ ಕಾರು ಆನೆಮಜಲು ಬಳಿ ಹೆದ್ದಾರಿ ಬದಿಯ ತೋಡಿಗೆ ಪಲ್ಟಿಯಾಗಿದ್ದು, ಕಾರು ಜಖಂಗೊಂಡಿದೆ.













