ಪುತ್ತೂರು ಸೇರಿ 5 ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಕೃಷಿ ಸಹಕಾರ ಯೋಜನೆಯ ನೂತನ ಶಾಖೆಗಳಿಗೆ ನೇರ ನೇಮಕಾತಿ ಪ್ರಕಟಣೆ

0

ಪುತ್ತೂರು : ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ನೂತನ ಶಾಖೆಗಳಿಗೆ ಕರ್ನಾಟಕ ರಾಜ್ಯ ಕೃಷಿ ಸಹಕಾರ ಯೋಜನೆಯಡಿ ನೇರ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ವ್ಯವಸ್ಥಾಪಕ ಯೋಜನಾಧಿಕಾರಿ, ವೈಜ್ಞಾನಿಕ ಕೃಷಿ ಯೋಜನಾಧಿಕಾರಿ, ಸಬ್ ಡಿವಿಷನ್ ಯೋಜನಾಧಿಕಾರಿ, ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಿಂಗಳಿಗೆ 25,000 ದಿಂದ 35,000 ಸಂಬಳ ನಿಗದಿಪಡಿಸಲಾಗಿದ್ದು, ಗ್ರಾಮ, ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಕೆಲಸ ನೀಡಲಾಗುವುದು.

SSLC, LCRP, MBK, ಆಶಾ ಕಾರ್ಯಕರ್ತೆ, ಸ್ವಸಹಾಯ ಸಂಘದ ಸದಸ್ಯರು ಅರ್ಜಿ ಸಲ್ಲಿಸಬಹುದು. ದ್ವಿಚಕ್ರ ವಾಹನ ಚಾಲನಾ ಸಾಮರ್ಥ್ಯವುಳ್ಳ ವಿವಾಹಿತ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

ಲಿಖಿತ ಪರೀಕ್ಷೆ ಇರುವುದಿಲ್ಲ, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತರು ಕನ್ನಡದಲ್ಲಿ ಅರ್ಜಿ ಬರೆದು ಆಧಾರ್ ಸಮೇತ 7259495639 ನಂಬರ್‌ಗೆ ವಾಟ್ಸಾಪ್ ಮಾಡಲು ತಿಳಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here